ಛತ್ತೀಸ್ಗಢ ಸಿಎಂ ಭೂಪೇಶ್'ರಿಂದ ಸಂಪುಟ ವಿಸ್ತರಣೆ: 9 ಶಾಸಕರು ಸಚಿವರಾಗಿ ಪ್ರಮಾಣವಚನ
ಛತ್ತೀಸ್ಗಢ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಭೂಪೇಶ್ ಬಘೇಲ್ ಅವರು ಸಂಪುಟ ವಿಸ್ತರಣೆ ಮಾಡಿದ್ದು, 9 ಕಾಂಗ್ರೆಸ್ ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದಾರೆ...
ಛತ್ತೀಸ್ಗಢ ಸಿಎಂ ಭೂಪೇಶ್'ರಿಂದ ಸಂಪುಟ ವಿಸ್ತರಣೆ: 9 ಶಾಸಕರು ಸಚಿವರಾಗಿ ಪ್ರಮಾಣವಚನ
ರಾಯ್ಪುರ: ಛತ್ತೀಸ್ಗಢ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಭೂಪೇಶ್ ಬಘೇಲ್ ಅವರು ಸಂಪುಟ ವಿಸ್ತರಣೆ ಮಾಡಿದ್ದು, 9 ಕಾಂಗ್ರೆಸ್ ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದಾರೆ.
ಮಹಿಳಾ ಶಾಸಕಿಯರು ಸೇರಿ ಒಟ್ಟು 9 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಪ್ರತಿಜ್ಞಾವಿಧಿಯನ್ನು ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ಬೋಧಿಸಿದ್ದಾರೆ.
ಮೊಹಮ್ಮದ್ ಅಕ್ಬರ್, ಉಮೇಶ್ ಪಟೇಲ್, ಅನಿಲಾ ಭೇಡಿಯಾ ಮತ್ತು ರವೀಂದ್ರ ಛೌಬೇ ಸೇರಿದಂತೆ ಎಲ್ಲಾ 9 ಸಚಿವರೂ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿತ್ತು. ಡಿ.17 ರಂದು ಛತ್ತೀಸ್ಗಢ ನೂತ ಮುಖ್ಯಮಂತ್ರಿಯಾಗಿ ಬಘೇಲ್ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದರು.