ದೇಶದಾದ್ಯಂತ ಕ್ರಿಸ್'ಮಸ್ ಸಂಭ್ರಮ: ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ದೇಶದಾದ್ಯಂತ ಕ್ರಿಸ್'ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ....
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on: 
ನವದೆಹಲಿ: ದೇಶದಾದ್ಯಂತ ಕ್ರಿಸ್'ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ನಾವು ಯೇಸು ಕ್ರಿಸ್ತನ ಶ್ರೇಷ್ಠ ಬೋಧನೆಗಳನ್ನು ನೆನೆಯುತ್ತಿದ್ದೇವೆ ಹಾಗೂ ಸಹಾನುಭೂತಿ ಮತ್ತು ಸಮಾನ ಸಮಾಜ ಸೃಷ್ಟಿಯುವ ಅವರ ಶ್ರಮಗಳನ್ನು ಸ್ಮರಿಸುತ್ತಿದ್ದೇವೆಂದು ಹೇಳಿದ್ದಾರೆ.
ಕ್ರೈಸ್ತ ಬಾಂಧವರ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕ್ರಿಸ್ ಮಸ್ ಹಬ್ಬವನ್ನು ಇಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಕ್ರೈಸ್ತಬಾಂಧವರ ಮನೆಗಳಲ್ಲಿ ವಾರದಿಂದಲೇ ಕ್ರಿಸ್ ಮಸ್ ತಯಾರಿ ಆರಂಭವಾಗಿದ್ದು, ಚರ್ಚ್ ಗಳು ತರೇಹವಾರಿ ವಿದ್ಯುತ್ ದೀಪಗಳಿಂದ ಕಂಗೊಳ್ಶುತ್ತಿವೆ. ನಕ್ಷತ್ರಾಕಾರದ ವಿದ್ಯುತ್ ದೀಪಗಳು ಚರ್ಚ್ ಗಳ ಅಂದವನ್ನು ಹೆಚ್ಚಿವೆ. ಕ್ರೈಸ್ತ ಶಾಲಾ-ಕಾಲೇಜುಗಳ ಕಟ್ಟಗಳನ್ನು ವಿದ್ಯುತ್ ದೀಪಗಳಿಂಗ ಅಲಂಕರಿಸಲಾಗಿದೆ. 
ಕ್ರಿಸ್ ಮಸ್ ಹಬ್ಬದ ವೇಳೆ ಕೇಕ್ ಗಳಲ್ಲೇ ಮುಖ್ಯ ವಿಶೇಷವಾಗಿದ್ದು, ಕ್ರೈಸ್ತ ಬಾಂಧವರ ಮನೆಗಳಲ್ಲಿ ಸದಸ್ಯರೆಲ್ಲ ಸೇರಿ ಕೇಕ್ ಹಾಗೂ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸುತ್ತಾರೆ. ಹದಿನೈದು ದಿನಗಳ ಮುಂಚೆಯೇ ಕೇಕ್ ತಯಾರಿಸುವ ಕೆಲಸ ಆರಂಭಿಸಿದ್ದು, ಕ್ರಿಸ್ ಮಸ್ ದಿನ ಬಂಧು-ಬಾಂಧವರು, ಸ್ನೇಹಿತರಿಗೆ ವಿತರಿಸಿ ಸಂಭ್ರಮಿಸುತ್ತಾರೆ. ತಮ್ಮ ಆಪ್ತರ ಮನೆಗಳಿಗೆ ಖುದ್ದು ತೆರಳಿ ಕೇಕ್ ಹಂಚಿ ಶುಭಾಶಯಗಳನ್ನು ಹೇಳಲಾಗುತ್ತದೆ. ಎಲ್ಲರ ಬದುಕು ಕೇಕ್ ನಂತೆಯೇ ಸಿಹಿಯಾಗಿರಲಿ ಎಂಬ ಉದ್ದೇಶದಿಂದ ಕೇಕ್ ಹಂಚಲಾಗುತ್ತದೆ. ಮನುಷ್ಯನಿಗೆ ಸುಖ ಮತ್ತು ದುಃಖ ಎದುರಾಗುತ್ತವೆ. ಎರನ್ನೂ ಸಮಾನವಾಗಿ ಸ್ವೀಕರಿಸಬೇಕು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂಬುದು ಯೇಸುವಿನ ಸಂದೇಶ ಎಂದು ಹೇಳಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com