ಮುಂಬೈ ಪೊಲೀಸರಿಂದ 1 ಸಾವಿರ ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ

ಮುಂಬೈ ಪೊಲೀಸರು ಹೊಸ ವರ್ಷ ಆಚರಣೆಗೂ ಮುನ್ನ ಭರ್ಜರಿ ಬೇಟೆಯಾಡಿದ್ದು, ಬರೋಬ್ಬರ 1 ಸಾವಿರ ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ಅನ್ನು ಶುಕ್ರವಾರ ಜಪ್ತಿ ಮಾಡಿದ್ದಾರೆ
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು
ಮುಂಬೈ: ಮುಂಬೈ ಪೊಲೀಸರು ಹೊಸ ವರ್ಷ ಆಚರಣೆಗೂ ಮುನ್ನ ಭರ್ಜರಿ ಬೇಟೆಯಾಡಿದ್ದು, ಬರೋಬ್ಬರ 1 ಸಾವಿರ ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ಅನ್ನು ಶುಕ್ರವಾರ ಜಪ್ತಿ ಮಾಡಿದ್ದಾರೆ.
ಪ್ರಮಾಣದ ನಿಷೇಧಿತ ಡ್ರಗ್ಸ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದು, ಬಂಧಿತರಿಂದ 1,000 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿರುವುದಾಗಿ ಮುಂಬೈ ಕ್ರೈಂ ಬ್ರಾಂಚ್ ನ ಆಂಟಿ-ನಾರ್ಕೋಟಿಕ್ಸ್ ಸೆಲ್ ಡಿಸಿಪಿ ಶಿವದೀಪ್ ಅವರು ತಿಳಿಸಿದ್ದಾರೆ.
ನಮಗೆ ಲಭಿಸಿದ ಮಾಹಿತಿಯ ಆಧಾರದ ಮೇಲೆ ನಾವು ಸುಮಾರು 100 ಕೆಜಿ ಫೆಂಟನಿಲ್ ಹೆಸರಿನ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಡ್ರಗ್ಸ್ ಗಳ ಮೌಲ್ಯ 1 ಸಾವಿರ ಕೋಟಿ ರು. ಎಂದು ಅವರು ಹೇಳಿದ್ದಾರೆ.
ಈ ಡ್ರಗ್ಸ್ ಅನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ಬಂಧಿತ ಆರೋಪಿಗಳು ಮಾಹಿತಿ ನೀಡಿದ್ದು, ಇದನ್ನು ಮೆಕ್ಸಿಕೋಗೆ ಕಳುಹಿಸಲು ಯೋಜಿಸಲಾಗಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com