ಪದ್ಮಶ್ರೀ ಪುರಸ್ಕೃತ ಲೇಖಕ ಚಂದ್ರಶೇಖರ್ ರಥ್ ನಿಧನ

ಖ್ಯಾತ ಲೇಖಕ ಹಾಗೂ ಪದ್ಮಶ್ರೀ ಪುರಸ್ಕೃತ ಚಂದ್ರಶೇಖರ ರಥ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಲೇಖಕ ಚಂದ್ರಶೇಖರ್ ರಥ್ (ಸಂಗ್ರಹ ಚಿತ್ರ)
ಲೇಖಕ ಚಂದ್ರಶೇಖರ್ ರಥ್ (ಸಂಗ್ರಹ ಚಿತ್ರ)
Updated on: 
ಬೆಂಗಳೂರು: ಖ್ಯಾತ ಲೇಖಕ ಹಾಗೂ ಪದ್ಮಶ್ರೀ ಪುರಸ್ಕೃತ ಚಂದ್ರಶೇಖರ ರಥ್ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ದೀರ್ಘಕಾಲಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಥ್ ಅವರು ನಿನ್ನೆ ಒಡಿಶಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ರಥ್ ಅವರನ್ನು ಕೇಂದ್ರ ಸರ್ಕಾರ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಒಡಿಶಾ  ಸಾಹಿತ್ಯ ಲೋಕಕ್ಕೆ ಚಂದ್ರಶೇಖರ್ ರಥ್ ಅವರ ಕೊಡುಗೆ ಅಪಾರವಾಗಿದ್ದು, ಹಲವು ಕಥೆ, ಕಾದಂಬರಿ, ಪದ್ಯ ಮತ್ತು ಗದ್ಯಗಳನ್ನು ಬರೆದಿದ್ದಾರೆ. ಇಂದಿಗೂ ಚಂದ್ರಶೇಖರ ರಥ್ ಅವರ ಹಲವು ಕೃತಿಗಳು ಒಡಿಶಾದ ಶಾಲಾ ಮಕ್ಕಳ  ಪಠ್ಯ ಪುಸ್ತಕದಲ್ಲಿ ಸ್ಥಾನ ಪಡೆದಿರುವುದು ಅವರ ಸಾಹಿತ್ಯ ಕೊಡುಗೆಗೆ ಸಾಕ್ಷಿಯಾಗಿದೆ.
1929 ಅಕ್ಟೋಬರ್ 17ರಂದು ಒಡಿಶಾದ ಬಲಂಗಿರ್ ನಲ್ಲಿ ಜನಿಸಿದ ಚಂದ್ರಶೇಖರ್ ರಥ್  ಅವರು, ಲಖನೌ ವಿವಿಯಲ್ಲಿ ಇಂಗ್ಲೀಷ್ ಸ್ಮಾತಕೋತ್ತರ ಪದವಿ ಪಡೆದಿದ್ದರು. 1952ರಲ್ಲಿ ಒಡಿಶಾ ಶಿಕ್ಷಣ ಸಂಸ್ಥೆಗೆ ಸೇರಿದ ಅವರು,  1987ರವರೆಗೂ ಇಂಗ್ಲೀಷ್ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿದ್ದರು. ಒಡಿಶಾ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಅಪಾರ ಸೇವೆಯನ್ನು ಗುರಿತಿಸಿ ಅವರಿಗೆ ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ. ಚಂದ್ರಶೇಖರ ರಥ್ ಅವರ ನಿಧನಕ್ಕೆ ಒಡಿಶಾ ಮುಖ್ಯ ಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ವಿವಿಧ ಗಣ್ಯರು ಕಂಬನಿ ಮಿಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com