ಮೋದಿ ಪರ ಪ್ರಚಾರಕ್ಕಾಗಿ ಸರ್ಕಾರದ ಹಣ ಬಳಕೆ: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕಾಗಿ ಸರ್ಕಾರದ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಈ ಎಂದು ಕಾಂಗ್ರೆಸ್ ಆರೋಪಿಸಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ  ಪ್ರಚಾರಕ್ಕಾಗಿ ಸರ್ಕಾರದ ಹಣವನ್ನು ಬಳಕೆ  ಮಾಡಿಕೊಳ್ಳಲಾಗುತ್ತಿದೆ ಈ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಸ್ಕಟ್ ನಲ್ಲಿ ಸಾರ್ವಜನಿಕ ಸಮಾರಂಭವನ್ನು ಆಯೋಜಿಸುವುದಕ್ಕಾಗಿ ಸರ್ಕಾರದ ಹಣವನ್ನು ವ್ಯಯಿಸಲಾಗುತ್ತಿದೆ  ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದ್ದು,  ಭಾರತ ಸರ್ಕಾರ ಇದಕ್ಕೆ ಹೇಗೆ ಅನುಮತಿ ನೀಡಿದೆ ಎಂಬುದನ್ನು ಹೇಳಬೇಕೆಂದು ಆಗ್ರಹಿಸಿದೆ.

ಮಸ್ಕಟ್ ನಲ್ಲಿರುವ  ರಾಯಭಾರಿ ಕಚೇರಿ ಅಧಿಕಾರಿಯೊಬ್ಬರು ಅಲ್ಲಿರುವ ಪ್ರಮುಖ ಭಾರತೀಯ ಕಂಪನಿಗಳಿಗೆ ಪತ್ರ ಬರೆದಿದ್ದು ಭಾರತೀಯ ರಾಯಭಾರಿ ಕಚೇರಿ ಭಾರತೀಯರಿಗಾಗಿ ಫೆಬ್ರವರಿ 2 ನೇ ವಾರದಂದು ಬೃಹತ್ ಸಮಾವೇಶ ಆಯೋಜಿಸಿದೆ ಎಂದು ಉಲ್ಲೇಖಿಸಿರುವ ಪಾತ್ರವನ್ನಾಧರಿಸಿ ಕಾಂಗ್ರೆಸ್ ಆರೋಪ ಮಾಡಿದೆ.

ಸಮಾವೇಶಕ್ಕೆ ಹಾಜರಾಗಬೇಕಿರುವ ಸಂಸ್ಥೆಗಳ ಶೇ.80 ರಷ್ಟು ಜನರು ಬ್ಲ್ಯೂ ಕಾಲರ್ ನೌಕರರಾಗಿರಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಆರೋಪಿಸಿದ್ದು ಮಸ್ಕಟ್ ನಲ್ಲಿ ಸಾರ್ವಜನಿಕ ಸಮಾರಂಭವನ್ನು ಆಯೋಜಿಸುವುದಕ್ಕಾಗಿ ಸರ್ಕಾರದ ಹಣವನ್ನು ವ್ಯಯಿಸಲಾಗುತ್ತಿದೆ  ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಕೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com