ಇನ್ನು ತನಿಖಾಧಿಕಾರಿಗಳು ತಿಳಿಸಿರುವಂತೆ ನೀರವ್ ಮೋದಿ ಕಳೆದ ಜನವರಿ 1 ರಂದು ದೇಶ ತೊರೆದಿದ್ದು, ವಿಮಾನ ನಿಲ್ದಾಣದಲ್ಲಿ ತನ್ನ ಪತ್ನಿ ಮತ್ತು ಇತರೆ ವಾಣಿಜ್ಯೋದ್ಯಮಿಗಳೊಂದಿಗೆ ತೆಗೆಸಿಕೊಂಡ ಫೋಟೋ ಅಧಿಕಾರಿಗಳಿಗೆ ಲಭ್ಯವಾಗಿದೆ. ಅಲ್ಲದೆ ಈ ಹಿಂದೆ ಅಂದರೆ ಜನವರಿ 23ರಂದು ದಾವೋಸ್ ನಲ್ಲಿ ನೀರವ್ ಮೋದಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಇದರ ಫೋಟೋಗಳೂ ಕೂಡ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಎಲ್ಲ ಮಾಹಿತಿಗಳನ್ನು ಗಮನಿಸುತ್ತಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಭಾರತದಲ್ಲಿ ಮಾತ್ರ ಸದ್ದು ಮಾಡುತ್ತಿದ್ದು, ಅಮೆರಿಕದಲ್ಲಿ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಪ್ರಮುಖವಾದಿ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಮೇಲೆ ಯಾವುದೇ ರೀತಿಯ ಪರಿಣಾಮವಾಗಿಲ್ಲ ಎನ್ನಲಾಗಿದೆ.