ಬ್ಯಾಂಕ್ ವಂಚನೆಯ ಪ್ರಕರಣ: ನೀರವ್ ಮೋದಿ ಪತ್ತೆಗೆ ಇಂಟರ್ ಪೋಲ್ ಮೊರೆ ಹೋದ ಸಿಬಿಐ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಚಿನ್ನಾಭರಣ ವ್ಯಾಪಾರಿ ಉದ್ಯಮಿ ನೀರವ್ ಮೋದಿ ಅವರ ಪತ್ತೆಗಾಗಿ ಸಿಬಿಐ ತಂಡವು ಇಂಟರ್ ಪೋಲ್ ಅನ್ನು ಸಂಪರ್ಕಿಸಿದೆ.
ಬ್ಯಾಂಕ್ ವಂಚನೆಯ ಪ್ರಕರಣ: ನೀರವ್ ಮೋದಿ ಪತ್ತೆಗೆ ಇಂಟರ್ ಪೋಲ್ ಮೊರೆ ಹೋದ ಸಿಬಿಐ
ಬ್ಯಾಂಕ್ ವಂಚನೆಯ ಪ್ರಕರಣ: ನೀರವ್ ಮೋದಿ ಪತ್ತೆಗೆ ಇಂಟರ್ ಪೋಲ್ ಮೊರೆ ಹೋದ ಸಿಬಿಐ
Updated on: 
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಚಿನ್ನಾಭರಣ ವ್ಯಾಪಾರಿ ಉದ್ಯಮಿ ನೀರವ್ ಮೋದಿ ಅವರ ಪತ್ತೆಗಾಗಿ ಸಿಬಿಐ ತಂಡವು ಇಂಟರ್ ಪೋಲ್ ಅನ್ನು ಸಂಪರ್ಕಿಸಿದೆ.
ಹಗರಣ ಬೆಳಕಿಗೆ ಬರುವ ಮುನ್ನವೇ ದೇಶ ತೊರೆದಿದ್ದ ಉದ್ಯಮಿ ಪತ್ತೆಗಾಗಿ ಡಿಫ್ಯೂಷನ್ ನೋಟೀಸ್ ಹೊರಡಿಸುವಂತೆ  ಸಿಬಿಐ ಇಂಟರ್ ಪೋಲ್ ಗೆ ಮನವಿ ಮಾಡೊದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಮಾಮೂಲು ನೋಟೀಸ್ ಗಿಂತ ಕಡಿಮೆ ಔಪಚಾರಿಕ ನೋಟೀಸ್ ಆಗಿದೆ. ಆದರೆ ಪೋಲಿಸ್ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿ ನೆಲೆಸಿರಬಹುದಾದ ಸ್ಥಳ ಬಗೆಗೆ ಹೆಚ್ಚುವರಿ ಮಾಹಿತಿ ಮತ್ತು ಬಂಧನವನ್ನು ಕೋರಲು ಸಹ ಈ ಡಿಫ್ಯೂಷನ್ ನೋಟೀಸ್ ಬಳಕೆಯಾಗುತ್ತದೆ ಎಂದು ಇಂಟರ್ ಪೋಲ್ ಜಾಲತಾಣದಲ್ಲಿ ಹೇಳಲಾಗಿದೆ.  
ಇಂದು ಸಂಜೆಯೊಳಗೆ ಮೋದಿ ಮತ್ತು ಅವರ ಕುಟುಂಬ ನೆಲೆಯಾಗಿರುವ ಸ್ಥಳದ ಮಾಹಿತಿ ಪಡೆಯುವ ಬಗ್ಗೆ ಸಿಬಿಐ ಭರವಸೆ ಹೊಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11,400 ಕೋಟಿ ರೂ. ವಂಚನೆ ಮಾಡಿರುವ ನೀರವ್ ಮೋದಿ ಜನವರಿ ಮೊದಲ ವಾರದಲ್ಲಿ ದೇಶವನ್ನು ತೊರೆದಿದ್ದರು. ಜನವರಿ ಒಂದರಂದು ದೇಶದಿಂದ ಪಲಾಯನ ಮಾಡಿದ್ದ ಉದ್ಯಮಿಯ ಸೋದರರಾದ ನಿಶಾಲ್ ಬೆಲ್ಜಿಯಂ ಪ್ರಜೆಯಾಗಿದ್ದು ಅವರು ಸಹ ಜನವರಿಯಲ್ಲಿಯೇ ದೇಶವನ್ನು ತೊರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com