ದೇಶ

ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯಿಂದ ಮುಕ್ತಿಗೊಳಿಸುವುದು ಇರಾನ್, ಭಾರತದ ಉದ್ದೇಶ: ಮೋದಿ

ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯಿಂದ ಮುಕ್ತಿಗೊಳಿಸುವುದು ಇರಾನ್, ಭಾರತದ ಉದ್ದೇಶ: ಮೋದಿ
ನವದೆಹಲಿಯಲ್ಲಿ ಇರಾನ್ ಅಧ್ಯಕ್ಷ ಹಸನ್ ರೌಹಾನಿಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ನರೇಂದ್ರಮೋದಿ ಚಿತ್ರ
Published On :

ನವದೆಹಲಿ: ವೀಸಾದಲ್ಲಿ ಸರಳೀಕರಣ, ಹೆಚ್ಚಿನ ತೆರಿಗೆ ತಡೆಗಟ್ಟುವುದು ಸೇರಿದಂತೆ  ಒಂಬತ್ತು ಒಪ್ಪಂದಗಳಿಗೆ ಇರಾನ್ ಹಾಗೂ ಭಾರತ ಸಹಿ ಹಾಕಿವೆ.

ಇರಾನ್ ಅಧ್ಯಕ್ಷ ಹಸನ್ ರೌಹಾನಿಯೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ನರೇಂದ್ರಮೋದಿ, ನೆರೆಯ  ಅಪ್ಘಾನಿಸ್ತಾನವನ್ನು ಉಗ್ರರಿಂದ ರಕ್ಷಿಸಿ ಸುರಕ್ಷಿತವಾಗಿಡುವುದು ಇರಾನ್ ಹಾಗೂ ಭಾರತದ ಉದ್ದೇಶವಾಗಿದೆ ಎಂದರು.

ಅಪ್ಘಾನಿಸ್ತಾನವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸುವುದು ಉಭಯ ರಾಷ್ಟ್ರಗಳ ಧ್ಯೇಯವಾಗಿದೆ ಎಂದರು.

ಭಾರತ ಸರ್ಕಾರಕ್ಕೆ ಧನ್ಯವಾದ ಆರ್ಪಿಸಿದ ರೌಹಾನಿ, ಆರ್ಥಿಕತೆ ಮತ್ತು  ಸಾಗಣೆ ಸಂಬಂಧ ಉಭಯ ರಾಷ್ಟ್ರಗಳು ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ಉಭಯ ರಾಷ್ಟ್ರಗಳ ನಡುವಿನ ರೈಲ್ವೆ ಸಂಪರ್ಕ ಅಭಿವೃದ್ಧಿ ಹಾಗೂ ಚಾಬಹರ್ ಬಂದರು ಅಭಿವೃದ್ಧಿ ಸಂಬಂಧ ಮಾತುಕತೆ ನಡೆಸಿರುವುದಾಗಿ ರೌಹಾನಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.