ರಾಜ್ಯದ ಹಿತಾಸಕ್ತಿಯನ್ನು ಬದಿಗಿರಿಸಿ ರಾಜೀ ಮಾಡಿಕೊಳ್ಳುವುದಿಲ್ಲ ಯಾವುದೇ ತ್ಯಾಗಕ್ಕೂ ತಾವು ಸಿದ್ಧರಿಲ್ಲ ಎಂಬ ಸಂದೇಶವನ್ನು ಚಂದ್ರಬಾಬು ನಾಯ್ಡು ರವಾನೆ ಮಾಡಿದ್ದಾರೆ. 2014 ರ ಆಂಧ್ರಪ್ರದೇಶ ಪುನರ್ವಿಂಗಡೆ ಕಾಯ್ದೆಯಲ್ಲಿ ನೀಡಲಾಗಿರುವ ಎಲ್ಲಾ ಭರವಸೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ಈಡೇರಿಸಬೇಕು ಎಂದು ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.