ಮೋದಿ ಭ್ರಷ್ಟಾಚಾರ ವಿರೋಧಿ ಅಲ್ಲ, ಭ್ರಷ್ಟಾಚಾರದ ಸಾಧನ: ರಾಹುಲ್ ಕಿಡಿ

ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ. ಮೋದಿ ಭ್ರಷ್ಟಾಚಾರ ವಿರೋಧಿ ಅಲ್ಲ, ಅವರೇ ಭ್ರಷ್ಟಾಚಾರದ ಮೂಲ ಸಾಧನವೆಂದು ಅವರು ಆರೋಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಚಿತ್ರ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಚಿತ್ರ
Updated on: 

ನವದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ. ಮೋದಿ ಭ್ರಷ್ಟಾಚಾರ ವಿರೋಧಿ ಅಲ್ಲ, ಅವರೇ ಭ್ರಷ್ಟಾಚಾರದ ಮೂಲ ಸಾಧನವೆಂದು ಅವರು ಆರೋಪಿಸಿದ್ದಾರೆ.

 ಪ್ರಧಾನಿ ನರೇಂದ್ರಮೋದಿ ನೋಟ್ ಅಮಾನ್ಯೀಕರಣ ಕ್ರಮದಿಂದಾಗಿ ನೀರವ್ ಮೋದಿ ಅಂತಹ ಜನರು ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದಾವೋಸ್ ನಲ್ಲಿ ಇತ್ತೀಚಿಗೆ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಆಭರಣ ಉದ್ಯಮಿ ನೀರವ್ ಮೋದಿ ಪ್ರಧಾನಿ ನರೇಂದ್ರಮೋದಿ ಜೊತೆಗಿನ ಪೋಟೋದಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಪ್ರಧಾನಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಹಾಗೂ ರಾಪೆಲ್ ಡೀಲ್ ಸಂಬಂಧ ಪ್ರಧಾನಿ ಮೌನ ಮುರಿಯಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಕಳೆದ ತಿಂಗಳಿನ ಮನ್ ಕೀ ಬಾತ್ ನಲ್ಲಿ ತಮ್ಮ ಸಲಹೆಯನ್ನು ನಿರಾಕರಿಸಿರುವುದಕ್ಕೆ ಸ್ವಾಗತಿಸುತ್ತೇನೆ . ನೀರವ್ ಮೋದಿ 22 ಸಾವಿರ ಕೋಟಿ ಲೂಟಿ ಮತ್ತು ಪಲಾಯನ, 58 ಸಾವಿರ ಕೋಟಿ ರೂ ಮೌಲ್ಯದ ರಾಪೆಲ್ ಹಗರಣದ ಬಗ್ಗೆ ನೀವು ಮಾತನಾಡಬೇಕೆಂದು ದೇಶದ ಪ್ರತಿಯೊಬ್ಬರ ಒತ್ತಾಸೆಯಾಗಿದೆ. ತಮ್ಮ ಉಪದೇಶ ಕೇಳಲು ಕಾಯುತ್ತಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com