ನವದೆಹಲಿ: 2015ರ ಜೂನ್ ನಲ್ಲಿ ಮಣಿಪುರದಲ್ಲಿ ಸೇನೆ ಮೇಲೆ ದಾಳಿ ನಡೆಸಿ 18 ಯೋಧರ ಹತ್ಯೆಗೆ ಕಾರಣವಾಗಿದ್ದ ನಿಷೇಧಿತ ಮಣಿಪುರ ಉಗ್ರ ಸಂಘಟನೆಯ ಸದಸ್ಯನೊಬ್ಬನನ್ನು ರಾಷ್ಟ್ರೀಯ ಭದ್ರತಾ ಪಡೆ ಯೋಧರು ಬಂಧಿಸಿದ್ದಾರೆ.
ಉಗ್ರನ ಬಂಧನ ಮಾಡಿದ ಸ್ಥಳದ ಕುರಿತಂತೆ ಯಾವ ಮಾಹಿತಿಯನ್ನೂ ಎನ್ಐಎ, ಬಹಿರಂಗಪಡಿಸಿಲ್ಲ. ಆದರೆ ಮೊಯಿರಾಂಗ್ಥೆಮ್ ನಿಮಾಚಂದ್ ಮೈತಿ (22) ಕಂಗ್ಲೈಪಾಕ್ ಕಮಿನಿಸ್ಟ್ ಪಕ್ಷದ ಸಕ್ರಿಯ ಕಾರ್ಯಕರ್ತ ಎಂದು ಹೇಳಿದೆ.
2015ರ ಜೂನ್ ನಾಲ್ಕರಂದು ನಡೆದ ಉಗ್ರದಾಳಿಯಲ್ಲಿ ಈತ ಬಾಗವಹಿಸಿದ್ದ ಎನ್ನುವುದು ಖಚಿತಪಟ್ಟಿದೆ. ಈ ದಾಳಿಯಲ್ಲಿ 18 ಮಂದಿ ಯೋಧರು ಕೊಲ್ಲಲ್ಪಟ್ಟು 15 ಜನ ಗಾಯಗೊಂಡಿದ್ದರು.
ಬಂಧಿತನನ್ನು ಫೆ.20 ರಂದು ವಿಶೇಃಶ ನ್ಯಾಯಾಲಯದ ನ್ಯಾಯಾಧೀಶರೆದುರು ಹಾಜರು ಪಡಿಸಲಾಗಿತ್ತು. ಅಂದು ನ್ಯಾಯಾಧೀಶಾರು ಏಳು ದಿನಗಳ ಕಾಲಾವಧಿಗೆ ಉಗ್ರನನ್ನು ಎನ್ಐಎ, ವಶಕ್ಕೆ ವಹಿಸಿದ್ದರು.