ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಕಪಾಳಕ್ಕೆ 2 ಏಟು ಹೊಡೆದಿದ್ದಕ್ಕೇ 70 ಮಂದಿ ಪೊಲೀಸರಿಂದ ಮನೆಯ ಮೂಲೆ ಮೂಲೆಯಲ್ಲೂ ತೀವ್ರ ತಪಾಸಣೆ.. ತುಂಬಾ ಸಂತೋಷ.. ಆದರೆ ಜಸ್ಟಿಸ್ ಲೋಯಾ ಹತ್ಯೆ ಸಂಬಂಧ ಅಮಿತ್ ಶಾ ವಿಚಾರಣೆ ಯಾವಾಗ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ತಮ್ಮ ಟ್ವೀಟ್ ಮುಂದುವರೆಸಿರುವ ಕೇಜ್ರಿವಾಲ್, ತಮ್ಮ ಸಂಪುಟದ ಸಚಿವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಬಳಿ ಭೇಟಿಗಾಗಿ ಸಮಯ ಕೇಳಿದ್ದು, ಎಲ್ಲ ಅಧಿಕಾರಿಗಳು ಆಪ್ ಸರ್ಕಾರದೊಂದಿಗೆ ಕೆಲಸ ಮಾಡುವ ಕುರಿತು ಸೂಚನೆ ನೀಡುವಂತೆ ಕೇಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.