ನೀರವ್ ಮೋದಿ ಬೆನ್ನಲ್ಲೇ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ಪ್ರಕರಣ ದಾಖಲು

ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಬೆನ್ನಲ್ಲೇ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದ್ದು, ದ್ವಾರಕಾ ದಾಸ್ ಸೇಠ್ ವಿರುದ್ಧ ಸುಮಾರು 389 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಬೆನ್ನಲ್ಲೇ ಮತ್ತೋರ್ವ ವಜ್ರದ ವ್ಯಾಪಾರಿ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದ್ದು, ದ್ವಾರಕಾ ದಾಸ್ ಸೇಠ್ ವಿರುದ್ಧ ಸುಮಾರು 389 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣ ದಾಖಲಾಗಿದೆ.
ಮೂಲಗಳ ಪ್ರಕಾರ ದ್ವಾರಕಾನಾಥ್ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಂಸ್ಥೆಯಿಂದ 389.85 ಕೋಟಿ ಸಾಲ ಪಡೆದು ಅದನ್ನು ತೀರಿಸದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಸಿಬಿಐ ಮೂಲಗಳು ತಿಳಿಸಿರುವಂತೆ ಸಂಸ್ಥೆಯ ಸಭ್ಯಾ ಸೇಟ್, ರೀಟಾ ಸೇಟ್, ಕೃಷ್ಣ ಕುಮಾರ್ ಸಿಂಗ್, ರವಿಸಿಂಗ್ ಮತ್ತು ಸಂಸ್ಥೆಯ ಎಲ್ಲ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ಇದೇ ದ್ವಾರಕಾ ದಾಸ್ ಸೇಠ್ ಸಂಸ್ಥೆಯ ಸಹೋದರ ಸಂಸ್ಥೆ ಎಂದು ಹೇಳಲಾಗುತ್ತಿರುವ ಮತ್ತೊಂದು ಸಂಸ್ಥೆಯ ವಿರುದ್ಧವೂ ದೂರು ದಾಖಲಾಗಿದ್ದು, ದ್ವಾರಕಾ ದಾಸ್ ಸೇಠ್ ಎಸ್ ಇಎಜ್ ಇನ್ ಕಾರ್ಪೋರೇಷನ್ ಸಂಸ್ಥೆ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ದೂರಿನಲ್ಲಿರುವಂತೆ ಸಂಸ್ಥೆ 2007ರಿಂದ 2012ರ ಅವಧಿಯಲ್ಲಿ ನಿಯಮಿತವಾಗಿ ಸಾಲಪಡೆದಿದ್ದು, ಈ ಮೊತ್ತ ಇದೀಗ ಒಟ್ಟಾರೆ 389 ಕೋಟಿ ರೂ.ಗಳಾಗಿದೆ ಎಂದು ತಿಳಿದುಬಂದಿದೆ.
ಸಂಸ್ಥೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನ ಲೆಟರ್ ಆಫ್ ಕಾಮರ್ಸ್ ದಾಖಲೆ ಮೂಲಕ ಸಾಲ ಪಡೆದಿದ್ದು, ವಜ್ರ, ಚಿನ್ನ ಮತ್ತು ಅತ್ಯಮೂಲ್ಯ ಆಭರಣ ಕಲ್ಲುಗಳ ಖರೀದಿಗಾಗಿ ಈ ಹಣ ಬಳಕೆ ಮಾಡಿಕೊಂಡಿದೆ ಎನ್ನಲಾಗಿದೆ. ಒಟ್ಟಾರೆ ಸಿಬಿಐ ಇದೀಗ ಸಂಸ್ಥೆ ವಿರುದ್ಧ ಎಫ್ ಐಆರ್ ದಾಖಲು ಮಾಡಿದ್ದು, ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರ ಪಟ್ಟಿಗೆ ಮತ್ತೊಂದು ಸಂಸ್ಥೆ ಸೇರಿದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com