ಕಾಶ್ಮೀರದಲ್ಲಿ ಪಾಕ್ ನಿಂದ ಫಿರಂಗಿ ಶೆಲ್ ದಾಳಿ : ಗ್ರಾಮಸ್ಥರ ಸ್ಥಳಾಂತರ

ಭಾರತ ಮತ್ತು ಪಾಕಿಸ್ತಾನ ಪರಸ್ಪರ ಫಿರಂಗಿ ಶೆಲ್ದಾಳಿಯಲ್ಲಿ ನಿರತವಾಗಿದ್ದು, 100ಕ್ಕೂ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿರಂಗಿ ಶೆಲ್ ದಾಳಿಯಿಂದ ಕಟ್ಟಡ ಧ್ವಂಸಗೊಂಡಿರುವ ಚಿತ್ರ
ಪಿರಂಗಿ ಶೆಲ್ ದಾಳಿಯಿಂದ ಕಟ್ಟಡ ಧ್ವಂಸಗೊಂಡಿರುವ ಚಿತ್ರ
Updated on: 

ಜಮ್ಮು-ಕಾಶ್ಮೀರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಫಿರಂಗಿ ಶೆಲ್
ದಾಳಿಯಲ್ಲಿ ನಿರತವಾಗಿದ್ದು, 100ಕ್ಕೂ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

15 ವರ್ಷಗಳ ನಂತರ ಉಭಯ ರಾಷ್ಟ್ರಗಳ ನಡುವೆ ಪರಮಾಣು ಸಶಸ್ತ್ರ ಬಳಕೆ ಈ ವಲಯದಲ್ಲಿ ಕಂಡುಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಹುರಿ ಸೆಕ್ಟರ್ ನಲ್ಲಿ ನಿನ್ನೆ ನಡೆದ ದಾಳಿ ಬಗ್ಗೆ ಸಂಪೂರ್ಣ ಮಾಹಿತಿ ದೊರೆಕಿಲ್ಲ. ಆದರೆ, ಭಾರತದ ಸೇನಾ ಶಿಬಿರದ ಮೇಲೆ ಪಾಕ್ ದಾಳಿ
ಮಾಡಿ ಆರು ಮಂದಿ ಯೋಧರನ್ನು ಹತ್ಯೆಗೈದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಹುರಿ ವಲಯದಲ್ಲಿ ಪಾಕಿಸ್ತಾನ ಫಿರಂಗಿ ಶೆಲ್ ದಾಳಿ ನಡೆಸುತ್ತಿದ್ದು, ಭಾರತದಿಂದಲೂ ಪ್ರತ್ಯುತ್ತರ ನೀಡಲಾಗುತ್ತಿದೆ , ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ತಿಳಿಸಿದ್ದಾರೆ.

 ಈ ಹಿಂದಿನ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರ ಬಳಸಲಾಗುತಿತ್ತು. 2003ರ ನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com