ಈ ಬಗ್ಗೆ ವಿಶೇಷ ನ್ಯಾಯಾಧೀಶರಾದ ಎಂಎಸ್ ಅಜ್ಮಿ ಅವರ ನ್ಯಾಯಪೀಠಕ್ಕೆ ಇಡಿ ಮನವಿ ಸಲ್ಲಿಕೆ ಮಾಡಿದ್ದು, ಈ ಮನವಿ ಕುರಿತು ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಏಕಸದಸ್ಯ ನ್ಯಾಯಪೀಠ ಸಮ್ಮತಿ ಕೂಡ ನೀಡಿದೆ. ಮೂಲಗಳ ಪ್ರಕಾರ ಉದ್ಯಮಿ ನೀರವ್ ಮೋದಿ, ಯುಎಸ್ಎ, ಯುಎಇ, ಯುಕೆ, ಸಿಂಗಪುರ, ಚೀನಾ, ಹಾಂಕಾಂಗ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಉದ್ಯಮ ಮತ್ತು ಆಸ್ತಿ-ಪಾಸ್ತಿ ಹೊಂದಿದ್ದಾರೆ. ಹೀಗಾಗಿ ಈ ಬಗ್ಗೆ ಹಾಂಕಾಂಗ್, ಚೀನಾ ಸೇರಿದಂತೆ ವಿವಿಧ ದೇಶಗಳ ನ್ಯಾಯಾಲಯಗಳಿಗೆ ಮನವಿ ನೀಡಲೂ ಕೂಡ ಜಾರಿ ನಿರ್ದೇಶನಾಲಯ ಮುಂದಾಗಿದೆ.