ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ್ದ ಹಿಮಪಾತದ ವೇಳೆ ಸಾವನ್ನಪ್ಪಿದ್ದ ಮೂವರು ವ್ಯಕ್ತಿಗಳ ಮೃತದೇಗಳು ಗುರುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಗುಚಿಬಾಲ್ ಬೆಹಕ್ ಎಂಬಲ್ಲಿ ಫೆ.24 ರಂದು ಹಿಮಪಾತ ಸಂಭವಿಸಿತ್ತು. ಈ ವೇಳೆ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದರು.
ನಾಪತ್ತೆಯಾದ ವ್ಯಕ್ತಿಗಳಿಗಾಗಿ ಕಾರ್ಯಾಚರಣೆಗಳು ಆರಂಭವಾಗಿದ್ದವು. ಇದರಂತೆ ಇಂದೂ ಕೂಡ ರಾಷ್ಟ್ರೀಯ ರೈಫಲ್ಸ್ ಪಡೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ವಿಪತ್ತು ಪರಿಹಾರ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮೂವರು ವ್ಯಕ್ತಿಗಳ ಮೃತದೇಹಗಳು ದೊರಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತಪಟ್ಟಿಯುವ ವ್ಯಕ್ತಿಗಳನ್ನು ಅಲ್ತಾಫ್ ಅಹ್ಮದ್, ಬಶೀರ್ ಅಹಮದ್, ಘುಲಾಮ್ ಮುಹಮ್ಮದ್ ಎಂದು ಗುರ್ತಿಸಲಾಗಿದೆ.