ಮಧುರೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ರವಿಚಂದ್ರನ್ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ.
ಮದ್ರಾಸ್ ಹೈಕೋರ್ಟ್ ರಾಜೀವ್ ಗಾಂಧಿ ಹಂತಕನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಹೇಳಿದ್ದು, ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ರವಿಚಂದ್ರನ್ ತನ್ನ ತಾಯಿಯನ್ನು ಭೇಟಿ ಮಾಡಲು ಹಾಗೂ ಆಸ್ತಿ ಸಂಬಂಧಿಸಿದ ವಿಷಯಗಳನ್ನು ಇತ್ಯರ್ಥಗೊಳಿಸುವುದಕ್ಕಾಗಿ ಪೆರೋಲ್ ಅರ್ಜಿ ಸಲ್ಲಿಸಿದ್ದ.
1991 ರಿಂದ ರವಿಚಂದ್ರನ್ ಸೇರಿದಂತೆ ರಾಜೀವ್ ಗಾಂಧಿ ಹತ್ಯೆಯ 6 ಅಪರಾಧಿಗಳು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.