ಮಧ್ಯಪ್ರದೇಶ: ಸಾಕು ಇಲಿ ಸಾವು; ಮನನೊಂದು ಬಾಲಕಿ ಆತ್ಮಹತ್ಯೆ

ಪ್ರೀತಿಯಿಂದ ಸಾಕಿದ್ದ ಬಿಳಿ ಇಲಿಯೊಂದು ಸಾವನ್ನಪ್ಪಿದ್ದರಿಂದ ಮನನೊಂದು 12 ವರ್ಷದ ಬಾಲಕಿಯೊಬ್ಬಳಲು ಆತ್ಮಹತ್ಯೆಗೆ ಶರಣಾಗಿದ್ದಾಳೆ...
ಬಿಳಿ ಇಲಿ
ಬಿಳಿ ಇಲಿ
Updated on: 
ಭೋಪಾಲ್: ಪ್ರೀತಿಯಿಂದ ಸಾಕಿದ್ದ ಬಿಳಿ ಇಲಿಯೊಂದು ಸಾವನ್ನಪ್ಪಿದ್ದರಿಂದ ಮನನೊಂದು 12 ವರ್ಷದ ಬಾಲಕಿಯೊಬ್ಬಳಲು ಆತ್ಮಹತ್ಯೆಗೆ ಶರಣಾಗಿದ್ದಾಳೆ. 
ಸುರಭಿ ವಿಹಾರ್ ಮನೆಯಲ್ಲಿ ನಿನ್ನೆ 12 ವರ್ಷದ ದಿವ್ವಾನ್ಶಿ ರಾಥೋರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಅಯೋಧ್ಯ ನಗರ ಪೊಲೀಸ್ ಠಾಣಾಧಿಕಾರಿ ಬಾಲ್ಜೀತ್ ಸಿಂಗ್ ತಿಳಿಸಿದ್ದಾರೆ. 
ಇತ್ತೀಚೆಗಷ್ಟೇ ಮನೆಯಲ್ಲಿ ಸಾಕಿದ್ದ ಬಿಳಿ ಇಲಿಯೊಂದು ಸಾವನ್ನಪ್ಪಿತ್ತು. ಅಂದಿನಿಂದ ದಿವ್ವಾನ್ಶಿ ಖಿನ್ನತೆಗೆ ಒಳಗಾಗಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. 
ತಿಂಗಳ ಹಿಂದೆ ನಾಯಿಯೊಂದು ಮೃತಪಟ್ಟಿದ್ದು ಆಗಲು ದಿವ್ವಾನ್ಶಿ ಅವರು ಖಿನ್ನತೆಗೆ ಒಳಗಾಗಿದ್ದಳು. ಆದರೆ ಎರಡು ದಿನಗಳ ಹಿಂದೆ ಇಲಿ ಸತ್ತಿದ್ದರಿಂದ ತೀವ್ರ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಲ್ಜೀತ್ ಸಿಂಗ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com