ಕೇರಳ ಸಿಎಂ ವಿಜಯನ್ ಪಿಣರಾಯಿ, ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಎಲ್ಲರೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಸಿಪಿಐ ನಾಯಕ, ಶಾಸಕ ರಾಜಾಜೀ ಮಾಥ್ಯೂ ಥಾಮ್ಸನ್ ಹೇಳಿದ್ದಾರೆ. ಕೇರಳದ ಯಾವ ಮುಖ್ಯಮಂತ್ರಿಯೂ ಸಹ ಮಾಧ್ಯಮಗಳಿಗೆ ಗೆಟ್ ಔಟ್(ಹೊರ ಹೋಗಿ) ಎಂದು ಹೇಳಿಲ್ಲ, ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಮಾಡಿದನ್ನೇ ವಿಜಯ್ ಸಹ ಮಾಡುತ್ತಿದ್ದಾರೆ ಎಂದು ಸಿಪಿಐ ನ ಮುಖವಾಣಿ ಪತ್ರಿಕೆಯ ಸಂಪಾದಕರೂ ಆಗಿರುವ ರಾಜಾಜೀ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.