ಈ ಹೊಸ ಪರಿಕಲ್ಪನೆಯಲ್ಲಿ ಆಧಾರ್ ಸಂಖ್ಯೆಯನ್ನು ಇತರರೊಂದಿಗೆ ಹಂಚಿಕೊಳ್ಳದೆ ಇರುವ ಆಯ್ಕೆಯನ್ನು ನೀಡಲಾಗಿದೆ. 'ವರ್ಚ್ಯುಯಲ್ ಐಡಿ' 16 ಸಂಖ್ಯೆಯನ್ನು ಹೊಂದಿದ್ದು, ಆಧಾರ್ ಕಾರ್ಡ್ ನೊಂದಿಗೆ ಇದನ್ನು ಬಳಸಬಹುದಾಗಿದೆ. 'ವರ್ಚ್ಯುಯಲ್ ಐಡಿ' ಮೂಲಕ ಮಾಹಿತಿಯನ್ನು ಕೇವಲ ಹೆಸರು, ವಿಳಾಸ ಮತ್ತು ಫೋಟೋಗೆ ಮಾತ್ರ ಸೀಮಿತಗೊಳಿಸಲಾಗಿದೆ ಮತ್ತು ಯಾವುದೇ ಪರಿಶೀಲನೆಗೆ ಇದು ಸಾಕಾಗುತ್ತದೆ ಎಂದು ಯುಐಡಿಎಐ ಹೇಳಿದೆ.