ಪಾಕಿಸ್ತಾನದಿಂದ ಹಾದುಹೋಗುವ ಸುಮಾರು 14 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗೆ ಪಾಕಿಸ್ತಾನದಿಂದಲೇ ಕೆಲವೊಂದು ಅಡ್ಡಿ ಉಂಟಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಡೈಮರ್-ಬಾಷಾ ಡ್ಯಾಂ ಯೋಜನೆಗೆ ಸಂಬಂಧಿಸಿದಂತೆಯೂ ಗೊಂದಲ ಉಂಟಾಗಿತ್ತು, ಈ ಬಗ್ಗೆ ನವೆಂಬರ್ ತಿಂಗಳಲ್ಲಿ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಜಲಸಂಪನ್ಮೂಲ ಪ್ರಾಧಿಕಾರದ ಅಧ್ಯಕ್ಷ ಚೀನಾ ಡ್ಯಾಂ ಗೆ ಸಂಬಂಧಿಸಿದ ಹೈಡ್ರೋ ಪವರ್ ಯೋಜನೆಯಲ್ಲಿ ಮಾಲಿಕತ್ವದ ಪಾಲನ್ನು ಕೇಳಿತ್ತು, ಇದು ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಪಸ್ವರವೆತ್ತಿದ್ದರು. ಕೊನೆಗೆ ಉಭಯ ದೇಶಗಳೂ ಒಟ್ಟಾಗಿ ಅಭಿವೃದ್ಧಿಪಡಿಸುತ್ತಿರುವ ಯೋಜನೆಗಳ ಪಟ್ಟಿಯಿಂದ ಡ್ಯಾಮ್ ಯೋಜನೆಯನ್ನು ಹಿಂಪಡೆಯಲಾಗಿತ್ತು.