ಇನ್ನು ಇದಕ್ಕೆ ಉಲ್ಟಾ ಹೊಡೆದಿರುವ ಮತ್ತಿಬ್ಬರು ನ್ಯಾಯಾಧೀಶರು ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಮುಖ್ಯ ನ್ಯಾಯಾಧೀಶರ ವಿರುದ್ಧ ಬಂಡಾಯವೂ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ನಡೆ ಬೆನ್ನಲ್ಲೇ ಈ ಹಿಂದೆ ಬಂಡಾಯ ನ್ಯಾಯಮೂರ್ತಿಗಳ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ನ್ಯಾ. ರಂಜನ್ ಗೊಗೋಯಿ ಅವರು ಇಂದು "ನ್ಯಾಯಾಂಗದಲ್ಲಿ ಯಾವುದೇ ಬಿಕ್ಕಟ್ಟಿಲ್ಲ' ಎಂದು ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಗಗೋಯಿ ಅವರು, ನಮ್ಮಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಎಂದು ಹೇಳಿದರು. ಅಂತೆಯೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಕೃತ್ಯ ಶಿಸ್ತನ್ನು ಉಲ್ಲಂಘನೆ ಮಾಡಿದಂತಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಗೊಗೋಯಿ ಯಾವುದೇ ಪ್ರತಿಕ್ರಿಯೆ ನೀಡದೆ, "ನನಗೀಗ ಲಕ್ನೋ ವಿಮಾನವನ್ನು ಹಿಡಿಯುವುದಿದೆ; ನಾನೀಗ ಏನನ್ನೂ ಹೇಳಲಾರೆ' ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.