'ಹೊಸ ಯುಗದ ಅಧಿಪತಿಗಳು': ಭಾರತ-ಇಸ್ರೇಲ್ ಸೌಹಾರ್ಧ ಸಂಬಂಧ ಕುರಿತು ನೇತಾನ್ಯಹು ಹೇಳಿಕೆ

ಭಾರತ ಮತ್ತು ಇಸ್ರೇಲ್ ದೇಶಗಳ ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಬಣ್ಣಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಇಸ್ರೇಲ್ ಪ್ರಧಾನಿ ನೇತಾನ್ಯಹು
ರಾಷ್ಟ್ರಪತಿ ಭವನದಲ್ಲಿ ಇಸ್ರೇಲ್ ಪ್ರಧಾನಿ ನೇತಾನ್ಯಹು
ನವದೆಹಲಿ: ಭಾರತ ಮತ್ತು ಇಸ್ರೇಲ್ ದೇಶಗಳ ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಬಣ್ಣಿಸಿದ್ದಾರೆ.
ಇಂದು ದೆಹಲಿಯ ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರಿಗೆ ಭಾರತೀಯ ಸೇನೆಯಿಂದ ಗಾರ್ಡ್ ಆಫ್ ಹಾನರ್ ಸಲ್ಲಿಕೆ ಮಾಡಲಾಯಿತು. ಇದಕ್ಕೂ ಮೊದಲು ರಾಜ್ ಘಾಟ್ ಗೆ ತೆರಳಿದ್ದ ನೆತಾನ್ಯಹು  ದಂಪತಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಕೆ ಮಾಡಿದರು. ಬಳಿಕ ರಾಷ್ಟ್ರಪತಿ ಭವನದತ್ತ ಆಗಮಿಸಿದ ಇಸ್ರೇಲ್ ಪ್ರಧಾನಿಗೆ ಭಾರತ ಸರ್ಕಾರದ ವತಿಯಿಂದ ಸೈನಿಕರು ಗೌರವ ವಂದನೆ ಸಲ್ಲಿಕೆ ಮಾಡಿದರು.  ಈ ವೇಳೆ ನೇತಾನ್ಯಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು. 
ಭಾರತ-ಇಸ್ರೇಲ್ 'ಹೊಸ ಸ್ನೇಗ ಯುಗದ ಅಧಿಪತಿಗಳು'
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೇಲ್ ಪ್ರಧಾನಿ ಭಾರತ ಮತ್ತು ಇಸ್ರೇಲ್ ಸ್ನೇಹ ಸಂಬಂಧವನ್ನು ಕೊಂಡಾಡಿದರು. ಭಾರತ ಮತ್ತು ಇಸ್ರೇಲ್ ದೇಶಗಳು ಹೊಸ ಸ್ನೇಹ ಯುಗದ ಅಧಿಪತಿಗಳು ಎಂದು ಬಣ್ಣಿಸಿದರು.  ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಐತಿಹಾಸಿಕ ಹೊಸ ಸ್ನೇಹಯುಗಕ್ಕೆ ನಾಂದಿ ಹಾಡಿತು.. ನನ್ನ ಭಾರತ ಭೇಟಿ ಅದರ ಮುಂದುವರಿದ ಭಾಗವಷ್ಟೇ...ಭವಿಷ್ಯದಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸ್ನೇಹ  ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಇಸ್ರೇಲ್ ಪ್ರಜೆಗಳಲ್ಲಿ ಭಾರತದ ಬಗ್ಗೆ ಅತೀವ ಗೌರವವಿದ್ದು, ನಮ್ಮ ಸ್ನೇಹ ಉಭಯ ದೇಶಗಳ ಸಮೃದ್ಧಿ, ಶಾಂತಿ ಮತ್ತು ಪ್ರಗತಿಯತ್ತ ಸಾಗಲಿದೆ ಎಂದು ನೇತಾನ್ಯಹು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com