ಭಾರತದ ಮೇಲಿನ ಇಸ್ರೇಲ್ ಪ್ರೀತಿಗೆ ಇದೊಂದು ಉದಾಹರಣೆ ಸಾಕು..!

ಭಾರತ ಮತ್ತು ಇಸ್ರೇಲ್ ನಡುವಿನ ಸೌಹಾರ್ಧ ಸಂಬಂಧ ಮುಂದುವರೆದಿದ್ದು. ಇಸ್ರೇಲ್ ಪ್ರಧಾನಿ ತಮ್ಮ ವಿಮಾನಕ್ಕೆ ಇಸ್ರೇಲ್ ಧ್ವಜದೊಂದಿಗೆ ಭಾರತದ ತ್ರಿವರ್ಣ ಧ್ವಜವನ್ನೂ ಕೂಡ ಕೂಡ ಕಟ್ಟಿಕೊಂಡು ಬರುವ ಮೂಲಕ ಇಸ್ರೇಲ್ ಭಾರತ ದೇಶದ ಸ್ನೇಹ ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೇ ಸಾರಿದೆ.
ಇಸ್ರೇಲ್ ಪ್ರಧಾನಿ ನೇತಾನ್ಯಹು ಆಗಮಿಸಿದ್ದ ವಿಮಾನ
ಇಸ್ರೇಲ್ ಪ್ರಧಾನಿ ನೇತಾನ್ಯಹು ಆಗಮಿಸಿದ್ದ ವಿಮಾನ
ನವದೆಹಲಿ: ಭಾರತ ಮತ್ತು ಇಸ್ರೇಲ್ ನಡುವಿನ ಸೌಹಾರ್ಧ ಸಂಬಂಧ ಮುಂದುವರೆದಿದ್ದು. ಇಸ್ರೇಲ್ ಪ್ರಧಾನಿ ತಮ್ಮ ವಿಮಾನಕ್ಕೆ ಇಸ್ರೇಲ್ ಧ್ವಜದೊಂದಿಗೆ ಭಾರತದ ತ್ರಿವರ್ಣ ಧ್ವಜವನ್ನೂ ಕೂಡ ಕೂಡ ಕಟ್ಟಿಕೊಂಡು ಬರುವ ಮೂಲಕ ಇಸ್ರೇಲ್ ಭಾರತ ದೇಶದ ಸ್ನೇಹ ಎಷ್ಟು ಮುಖ್ಯ ಎಂಬುದನ್ನು ಜಗತ್ತಿಗೇ ಸಾರಿದೆ.
ನಿನ್ಮೆಯಷ್ಟೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತಕ್ಕೆ ಬಂದಿಳಿದಿದ್ದು, ಆತ್ಮೀಯ ಮಿತ್ರನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ. ಒಂದು  ವಾರಗಳ ಕಾಲ ಭಾರತದಲ್ಲಿರುವ ಇಸ್ರೇಲ್ ಪ್ರಧಾನಿಯೂ ಅಷ್ಟೇ ಉತ್ಸಾಹದಿಂದ ಭಾರತಕ್ಕೆ ಆಗಮಿಸಿದ್ದಾರೆ. ಇಂದು ಇಸ್ರೇಲ್ ಪ್ರಧಾನಿಯವರು ತಮ್ಮ ಅಧಿಕೃತ ವಿಮಾನದಲ್ಲಿ ಇಸ್ರೇಲ್ ಧ್ವಜದ ಜೊತೆಗೆ ಭಾರತದ ಧ್ವಜವನ್ನು  ಹಾಕಿಕೊಂಡಿದ್ದರು. ಇದೊಂದು ಅಪರೂಪದ ಗೌರವವಾಗಿತ್ತು. ಇಸ್ರೇಲ್ ಪ್ರಧಾನಿ ಭಾರತವನ್ನ ಎಷ್ಟರಮಟ್ಟಿಗೆ ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ. 
ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಹೋಗಿದ್ದಾಗ ಬೆಂಜಮಿನ್ ನೇತಾನ್ಯಾಹು ಸಹ ವಿಮಾನ ನಿಲ್ದಾಣಕ್ಕೆ ಆಗಮಿಸಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ ಕೋರಿದ್ದರು. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರುವ ವೇಳೆ ಇಸ್ರೇಲ್ ಪ್ರಧಾನಿ ತಾವು ಧರಿಸಿದ್ದ ಸೂಟ್ ಮೇಲೆ ಭಾರತದ ಧ್ವಜ ಹಾಕಿಕೊಂಡಿದ್ದರು. ಅಂದು ಅವರ ಆ ನಡವಳಿಕೆ ಭಾರತೀಯರ ಮನಸ್ಸನ್ನು ಗೆದ್ದಿತ್ತು. ಅಲ್ಲದೆ ಪ್ರಧಾನಿ ಮೋದಿ ಅವರಿಗೆ 
ರಾಜಾತಿಥ್ಯ ನೀಡಿ ಸತ್ಕರಿಸಿದ್ದರು.
ಇದೀಗ ಭಾರತದ ಮೇಲಿನ ಪ್ರೀತಿಯನ್ನು ಇಸ್ರೇಲ್ ಪ್ರಧಾನಿ ಮತ್ತೊಮ್ಮೆ ಪ್ರದರ್ಶನ ಮಾಡುವ ಮೂಲಕ ತಮಗೆ ಭಾರತ ದೇಶ ಎಷ್ಟು ಮುಖ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com