ಸ್ವಿಟ್ಡರ್ಲೆಂಡ್'ನ ದಾವೋಸ್ ನಲ್ಲಿ ನಡೆಯುತ್ತರುವ ವಿಶ್ವ ಆರ್ಥಿಕ ವೇದಿಕೆ 48ನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೈತ್ರಿ ತೊರೆಯುವ ಕುರಿತು ಈ ಹಿಂದೆಯೂ ಶಿವಸೇನೆ ಸಾಕಷ್ಟು ಬಾರಿ ಹೇಳಿಕೆಯನ್ನು ನೀಡಿದೆ. ಈ ಬಗ್ಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಲು ಇಚ್ಛಿಸುವುದಿಲ್ಲ. ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸಲಾಗಿದೆ. ಮುಂದೆ ಕೂಡ ನಮ್ಮ ಮೈತ್ರಿ ಹೀಗೆಯೇ ಮುಂದುವರೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.