ದೇಶ

ಕೇಂದ್ರ ಬಜೆಟ್: ಹಿರಿಯ ನಾಗರಿಕರು, ವಿಧವೆಯರ ಮಾಸಿಕ ಪಿಂಚಣಿ 1 ಸಾವಿರ ರೂ. ಗೆ ಏರಿಕೆ?

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿಧವೆಯರು, ಹಿರಿಯ ನಾಗರಿಕರ ಮಾಸಿಕ ಪಿಂಚಣಿಯನ್ನು 1 ಸಾವಿರ ರೂ. ಗೆ ಹೆಚ್ಚಿಸುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್: ಹಿರಿಯ ನಾಗರಿಕರು, ವಿಧವೆಯರ ಮಾಸಿಕ ಪಿಂಚಣಿ 1 ಸಾವಿರ ರೂ. ಗೆ ಏರಿಕೆ?
ಪಿಂಚಣಿ ಯೋಜನೆ ಹೆಚ್ಚಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ಹಿರಿಯ ನಾಗರಿಕ, ವಿಧವೆಯರ (ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ  ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿಧವೆಯರು, ಹಿರಿಯ ನಾಗರಿಕರ ಮಾಸಿಕ ಪಿಂಚಣಿಯನ್ನು 1 ಸಾವಿರ ರೂ. ಹೆಚ್ಚಿಸುವ ಸಾಧ್ಯತೆ ಇದೆ.

ಕಳೆದ 12 ವರ್ಷಗಳಿಂದಲೂ ಪಿಂಚಣಿ ಯೋಜನೆಯನ್ನು ಪರಿಷ್ಕರಿಸಿಲ್ಲ. ಜೀವನಮಟ್ಟಕ್ಕನುಗುಣವಾಗಿ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆಯಡಿ ವಿಧವೆಯರಿಗೆ ಮಾಸಿಕ 1 ಸಾವಿರ ರೂ. ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆಯಡಿ ಕೇಂದ್ರಸರ್ಕಾರ ಹಿರಿಯ ನಾಗರಿಕರಿಗೆ ಮಾಸಿಕ 200 ಹಾಗೂ ವಿಧವೆಯರಿಗೆ ಮಾಸಿಕ 300 ರೂ ಪಿಂಚಣಿ ನೀಡುತ್ತಿದೆ.
 ಇದರಿಂದ ಜೀವನ ನಿರ್ವಹಣೆ ಅಸಾಧ್ಯ. ಹಾಗಾಗೀ ಮಾಸಿಕ 500 ಅಥವಾ 1 ಸಾವಿರ ರೂ. ಹೆಚ್ಚಿಸಬೇಕೆಂದು ಬಜೆಟ್ ಪೂರ್ವ ಸಮಾಲೋಚನೆ ವೇಳೆ  ಹೆಸರಾಂತ ಆರ್ಥಿಕ ತಜ್ಞ ಜೀನ್ ಡ್ರೀಜ್ ಅರುಣ್ ಜೇಟ್ಲಿ ಅವರನ್ನು ಒತ್ತಾಯಿಸಿದ್ದರು.

ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆ ಸಮಾಜದಲ್ಲಿನ  ಕೆಲ ಬಡವರಿಗೆ ನೆರವು ನೀಡುವ ಉತ್ತಮ ಯೋಜನೆಯಾಗಿದ್ದು, ಕೂಡಲೇ 500 ರೂ. ಹೆಚ್ಚಿಸುವಂತೆ ಆರ್ಥಿಕ ತಜ್ಞರ ಗುಂಪೊಂದು ಇತ್ತೀಚಿಗೆ ಅರುಣ್ ಜೇಟ್ಲಿಗೆ ಪತ್ರ ಕೂಡಾ ಬರೆದಿತ್ತು.






Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.