ಸದಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುತ್ತಿದ್ದ ಪತ್ನಿಯನ್ನು ಹತ್ಯೆಗೈದ ಪತಿ

ಸದಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುತ್ತಿದ್ದ ಪತ್ನಿಯಿಂದ ಬೇಸತ್ತು ಗಂಡ ಆಕೆಯನ್ನು ಕೊಲೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ...
ಫೇಸ್ ಬುಕ್
ಫೇಸ್ ಬುಕ್
Updated on: 
ಕೋಲ್ಕತ್ತಾ: ಸದಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುತ್ತಿದ್ದ ಪತ್ನಿಯಿಂದ ಬೇಸತ್ತು ಗಂಡ ಆಕೆಯನ್ನು ಕೊಲೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 
ಪತ್ನಿ ಮನೆಯಲ್ಲಿ ದೈನಂದಿನ ಕೆಲಸಗಳಾದ ಅಡುಗೆ ಹಾಗೂ ಮನೆಗೆಲಸದಲ್ಲಿ ತೊಡಗದೆ ನಿರಂತರವಾಗಿ ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ನಲ್ಲಿ ಅಪರಿಚಿತರೊಂದಿಗೆ ವೈವಾಹಿಕ ವ್ಯವಹಾರದಲ್ಲಿ ತೊಡಗಿದ್ದರಿಂದ ಬೇಸತ್ತ ಗಂಡ ಆಕೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. 
ಪತ್ನಿಯನ್ನು ಹತ್ಯೆಗೈದ ಆರೋಪಿಯನ್ನು ಸುರಾಜಿತ್ ಪಾಲ್ ಎಂದು ಗುರುತಿಸಲಾಗಿದೆ. ಸುರಾಜಿತ್ ಪತ್ನಿಯ ತುಂಪಾ ಪಾಲ್ ಜತೆ ಕೋಲ್ಕತ್ತಾದ ಚೆಟ್ಲಾದಲ್ಲಿನ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ. ಬುಧವಾರ ಮಧ್ಯಾಹ್ನ ಸುರಾಜಿತ್ ಮನೆಗೆ ಬಂದಿದ್ದು ಈ ವೇಳೆ ಪತ್ನಿ ತುಂಪಾ ಫೇಸ್ ಬುಕ್ ನಲ್ಲಿ ನಿರತಳಾಗಿದ್ದಾಳೆ. ಅಡುಗೆ ಮಾಡದಿದ್ದಕ್ಕೆ ಪತ್ನಿಯನ್ನು ಗದುರಿದ್ದಾನೆ. ಇದರಿಂದ ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಗಿದ್ದು ಸುರಾಜಿತ್ ಚಾಕುವಿನಿಂದ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. 
ಶಾಲೆ ಹೋಗಿದ್ದ ಮಗ ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನ ಬಿದ್ದಿದ್ದು ಕಂಡು ನೆರೆಮನೆಯವರಿಗೆ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿಯೇ ಕೊಲೆ ಮಾಡಿರಬಹುದು ಎಂದು ಶಂಕಿಸಿ ಆತನ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಿದ್ದರು. ಆದರೆ ಮಾರನೇ ದಿನ ಆರೋಪಿಯೆ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com