ಸಂತ್ರಸ್ತೆ ಮನೆಯಲ್ಲಿದ್ದಿದ್ದರೆ ನಿರ್ಭಯ ಪ್ರಕರಣವೇ ಸಂಭವಿಸುತ್ತಿರಲಿಲ್ಲ: ರಾಯ್ ಪುರದ ಶಿಕ್ಷಕಿ!

ನಿರ್ಭಯಾ ಪ್ರಕರಣದ ಬಗ್ಗೆ ಕೇಂದ್ರಿಯ ವಿದ್ಯಾಲಯದ-I ಶಿಕ್ಷಕಿಯೊಬ್ಬರು ಮಾತನಾಡಿದ್ದು, ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಮನೆಯಲ್ಲೇ ಇದ್ದಿದ್ದರೆ ಆ ಘಟನೆ ನಡೆಯುತ್ತಲೇ ಇರಲಿಲ್ಲ, ಸಂತ್ರಸ್ತೆ ಆಕೆಯ ಜೀವವನ್ನು
ಸಂತ್ರಸ್ತೆ ಮನೆಯಲ್ಲಿದ್ದಿದ್ದರೆ ನಿರ್ಭಯ ಪ್ರಕರಣವೇ ಸಂಭವಿಸುತ್ತಿರಲಿಲ್ಲ: ರಾಯ್ ಪುರದ ಶಿಕ್ಷಕಿ!
ಸಂತ್ರಸ್ತೆ ಮನೆಯಲ್ಲಿದ್ದಿದ್ದರೆ ನಿರ್ಭಯ ಪ್ರಕರಣವೇ ಸಂಭವಿಸುತ್ತಿರಲಿಲ್ಲ: ರಾಯ್ ಪುರದ ಶಿಕ್ಷಕಿ!
Updated on: 
ರಾಯ್ ಪುರ: ನಿರ್ಭಯಾ ಪ್ರಕರಣದ ಬಗ್ಗೆ ಕೇಂದ್ರಿಯ ವಿದ್ಯಾಲಯದ-I ಶಿಕ್ಷಕಿಯೊಬ್ಬರು ಮಾತನಾಡಿದ್ದು, ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಮನೆಯಲ್ಲೇ ಇದ್ದಿದ್ದರೆ ಆ ಘಟನೆ ನಡೆಯುತ್ತಲೇ ಇರಲಿಲ್ಲ, ಸಂತ್ರಸ್ತೆ ಆಕೆಯ ಜೀವವನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ಹೇಳಿದ್ದಾರೆ. 
ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡಿರುವ ಎಸ್ ಸಿಂಗ್, ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿಯರನ್ನು ರಾತ್ರಿ 8:30 ರ ವೇಳೆಗೆ ನಾನು ಹೊರಗೆ ನೋಡಿ, ಮನೆಗೆ ವಾಪಸ್ ತೆರಳುವಂತೆ ಹೇಳಿದೆ. ಪ್ರತಿಯೊಬ್ಬರ ರಕ್ಷಣೆಯೂ ಅವರ ಕೈಯ್ಯಲ್ಲಿಯೇ ಇದೆ. ನಿರ್ಭಯಾ ಪ್ರಕರಣದಲ್ಲಿ ಏನು ನಡೆಯಿತೋ ಅದು ತಪ್ಪು, ಆದರೆ ಸಂತ್ರಸ್ತೆ ರಾತ್ರಿ ವೇಳೆ ಮನೆಯಿಂದ ಹೊರಗೆ ಹೋಗದೇ ಇದ್ದಿದ್ದರೆ ಆ ಘಟನೆ ನಡೆಯುತ್ತಲೇ ಇರಲಿಲ್ಲ, ಆಕೆ ತನ್ನ ಜೀವವನ್ನು ಉಳಿಸಿಕೊಳ್ಳಬಹುದಿತ್ತು ಎಂದು ಶಿಕ್ಷಕಿ ಅಭಿಪ್ರಾಯಪಟ್ಟಿದ್ದಾರೆ. 
ಇದೇ ವೇಳೆ ಪೋಷಕರಿಗೂ ಕಿವಿ ಮಾತು ಹೇಳಿರುವ ಶಿಕ್ಷಕಿ, ಪೋಷಕರು ತಮ್ಮ ಮಕ್ಕಳಿಗೆ ಸಮವಸ್ತ್ರವನ್ನು ಹೇಗೆ ಧರಿಸಬೇಕೆಂಬುದನ್ನಾದರೂ ಹೇಳಿಕೊಡಬೇಕು ಎಂದು ಹೇಳಿದ್ದು, ಹೆಣ್ಣುಮಕ್ಕಳು ಲಿಪ್ ಸ್ಟಿಕ್ ನ್ನೂ ಹಾಕಿಕೊಳ್ಳಬಾರದು ಎಂದು ಶಿಕ್ಷಕಿ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com