11 ವರ್ಷದ ಬಾಲಕಿ ಮೇಲೆ 6 ತಿಂಗಳು ನಿರಂತರ ಅತ್ಯಾಚಾರ: ದುಷ್ಕರ್ಮಿಗಳನ್ನು ಹಿಗ್ಗಾ-ಮುಗ್ಗಾ ಥಳಿಸಿದ ವಕೀಲರು

ಶ್ರವಣ ದೋಷವಿದ್ದ 11 ವರ್ಷದ ಬಾಲಕಿ ಮೇಲೆ ಸತತ 6 ತಿಂಗಳಿನಿಂದ ಅತ್ಯಾಚಾರ ನಡೆಸಿದ್ದ 18 ಜನರನ್ನು ವಕೀಲರೇ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
11 ವರ್ಷದ ಬಾಲಕಿ ಮೇಲೆ 6 ತಿಂಗಳು ನಿರಂತರ ಅತ್ಯಾಚಾರ: ದುಷ್ಕರ್ಮಿಗಳನ್ನು ಹಿಗ್ಗಾ-ಮುಗ್ಗಾ ಥಳಿಸಿದ ವಕೀಲರು
11 ವರ್ಷದ ಬಾಲಕಿ ಮೇಲೆ 6 ತಿಂಗಳು ನಿರಂತರ ಅತ್ಯಾಚಾರ: ದುಷ್ಕರ್ಮಿಗಳನ್ನು ಹಿಗ್ಗಾ-ಮುಗ್ಗಾ ಥಳಿಸಿದ ವಕೀಲರು
Updated on
ಚೆನ್ನೈ: ಶ್ರವಣ ದೋಷವಿದ್ದ 11 ವರ್ಷದ ಬಾಲಕಿ ಮೇಲೆ ಸತತ 6 ತಿಂಗಳಿನಿಂದ ಅತ್ಯಾಚಾರ ನಡೆಸಿದ್ದ 18 ಜನರನ್ನು ವಕೀಲರೇ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸುವ ವೇಳೆಯಲ್ಲಿ ಕೋರ್ಟ್ ಸಂಕೀರ್ಣದೊಳಕ್ಕೆ ಎಳೆದೊಯ್ದ ವಕೀಲರ ಗುಂಪು ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವವರನ್ನು ಥಳಿಸಿದ್ದಾರೆ. ಈ ವೇಳೆ ಕೆಲವರು ಮೆಟ್ಟಿಲಿನಿಂದ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. 
ವಕೀಲರಿಂದ ಆರೋಪಿಗಳನ್ನು ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕೋರ್ಟ್ ಒಳಗೆ ಕರೆದೊಯ್ದಿದ್ದಾರೆ. ಈ ಘಟನೆ ನಡೆದ ನಂತರ ಮದ್ರಾಸ್ ಹೈಕೋರ್ಟ್ ಬಳಿ 300 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಳೆದ 6 ತಿಂಗಳಿಂದ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಸಹಪಾಠಿ ಸಂತ್ರಸ್ತೆಯ ಹಿರಿಯ ಸಹೋದರಿಗೆ ತಿಳಿಸಿದ್ದಾರೆ.  ಈ ವೇಳೆ ಸತ್ಯವನ್ನು ಬಹಿರಂಗಪಡಿಸಿರುವ ಸಂತ್ರಸ್ತೆ, ತಾವು ವಾಸಿಸುತ್ತಿರುವ ಅಪಾರ್ಟ್ ನಲ್ಲೇ ಇದ್ದ 18 ಮಂದಿ ತನ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮತ್ತು ಬರಿಸಿ ಅತ್ಯಾಚಾರ ನಡೆಸಿದ್ದಾರೆ. ಕೆಲವೊಮ್ಮೆ ಗ್ಯಾಂಗ್ ರೇಪ್ ಕೂಡ ನಡೆದಿದೆ ಎಂದು ಹೇಳಿದ್ದಾಳೆ. ಸಂತ್ರಸ್ತೆಯ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com