ಇನ್ನು ಸದನದಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಕಾರಣಕ್ಕೆ ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಲು ಬಿಜೆಪಿಗೆ ಹೆಚ್ಚು ಸಮಯ ದೊರೆಯುತ್ತದೆ. ಅನುರಾಗ್ ಠಾಕೂರ್, ಹುಕುಮ್ ದೇವ್ ನಾರಾಯಣ್ ಮತ್ತು ವೀರೇಂದ್ರ ಸಿಂಗ್ ಮಸ್ತ್ ಅವರಂತಹ ಕಿರಿಯ ಮುಖಂಡರು ನಿರ್ಣಯಕ್ಕೆ ಸಂಬಂಧಿಸಿ ಮಾತನಾಡುವ ಸಾಧ್ಯತೆ ಇದೆ. ಇಂತಹ ಕಿರಿಯ ಮುಖಂಡರೇ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂಬುದನ್ನು ತೋರಿಸುವುದು ಸರ್ಕಾರದ ಉದ್ದೇಶ. ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಈ ಭಾಷಣದಲ್ಲಿ ಲೋಕಸಭಾ ಚುನಾವಣೆಯನ್ನು ಅವಧಿಗೆ ಮುನ್ನವೇ ನಡೆಸುವ ಸುಳಿವು ಸಿಗಬಹುದೇ ಎಂಬ ಕುತೂಹಲ ಇದೆ.