ಕೊನೆಗೂ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಗುಡುಗಿದ್ರು, ಆದರೆ ಭೂಮಿ ಮಾತ್ರ ನಡುಗಲಿಲ್ಲ!

ಕಳೆದ 2016ರ ಡಿಸೆಂಬರ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವು ಲೋಕಸಭೆಯಲ್ಲಿ ಮಾತನಾಡಿದರೆ ಭೂಕಂಪ ಸಂಭವಿಸುತ್ತದೆ ಎಂದು ಹೇಳಿದ್ದರು...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 
ನವದೆಹಲಿ: ಕಳೆದ 2016ರ ಡಿಸೆಂಬರ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವು ಲೋಕಸಭೆಯಲ್ಲಿ ಮಾತನಾಡಿದರೆ ಭೂಕಂಪ ಸಂಭವಿಸುತ್ತದೆ ಎಂದು ಹೇಳಿದ್ದರು. ಇಂದು ಸರಿಸುಮಾರು 38 ನಿಮಿಷಗಳ ಕಾಲ ರಾಹುಲ್ ಗಾಂದಿ ಮಾತನಾಡಿದ್ದು ಆದರೆ ಭೂಮಿ ಮಾತ್ರ ನಡುಗಲಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ. 
13 ನಿಮಿಷ ಮಾತನಾಡಿದ್ರೆ ಭೂಕಂಪ ಎಂದು ಹೇಳಿದ್ದ ರಾಹುಲ್ ಗಾಂಧಿ 38 ನಿಮಿಷ ಮಾತನಾಡಿದರೂ ಭೂಕಂಪನ ಆಗಲಿಲ್ಲ ಎಂದು ಬಿಜೆಪಿಯ ಮುಖಂಡ ರಾಮ್ ಮಾಧವ್ ಟ್ವೀಟ್ ಮಾಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದನ್ನೇ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಇಂದು ಕೇಂದ್ರ ಸರ್ಕಾರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ರಾಹುಲ್ ಗಾಂಧಿ ಸುಮಾರು 38 ನಿಮಿಷಗಳ ಕಾಲ ಮಾತನಾಡಿದ್ದರು. 
ರಾಹುಲ್ ಗಾಂಧಿ ಭಾಷಣಕ್ಕೂ ಮುನ್ನ ಟ್ವೀಟರ್ ನಲ್ಲಿ #BhookampAaneWalaHai ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಅಧಿವೇಶನದಲ್ಲಿ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ 38 ನಿಮಿಷಗಳನ್ನು ನೀಡಲಾಗಿತ್ತು. ಈ ಹೊತ್ತಿನಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂಬ ಟ್ವೀಟರಿಗರು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com