

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂ ಪ್ರದೇಶದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಅಪಹರಿಸಿ ಕೊಂದ ಬಳಿಕ ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರೆಸಿದ್ದು, ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ .
ಪೊಲೀಸ್ ಕಾನ್ಸ್ ಟೇಬಲ್ ಸಲೀಂ ಅಹ್ಮದ್ ಶಾ ಅವರನ್ನು ಅಪಹರಿಸಿ ಹತ್ಯೆಗೈಯಲಾಗಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ನಡೆಯುತ್ತಿದೆ. ಶಾ ಕಥುವಾದಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿದ್ದರು.ರಜೆಯ ಮೇಲೆ ಕುಲ್ಗಾಂನಲ್ಲಿರುವ ಮನೆಯಲ್ಲಿದ್ದಾಗ ಅವರನ್ನು ಅಪಹರಿಸಿ ಹತ್ಯೆಗೈಯಲಾಗಿತ್ತು.
ರಾಜ್ಯ ಪೊಲೀಸ್ ಹಾಗೂ ಸೇನೆಯೊಂದಿಗೆ ಸಿಆರ್ ಪಿಎಫ್ ಪೊಲೀಸರು ಉಗ್ರರ ವಿರುದ್ಧದ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ. ಶ್ರೀನಗರದಿಂದ 70 ಕಿಲೋ ಮೀಟರ್ ದೂರದಲ್ಲಿರುವ ಕುಲ್ಗಾಂ ಖುದ್ವಾನಿ ಬಳಿ ಕಾರ್ಯಾಚಾರಣೆ ನಡೆಯುತ್ತಿದೆ.