ಟಿಡಿಪಿ, ಶಿವಸೇನೆ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ತಲೆಬಿಸಿ: ಎಲ್ ಜೆ ಪಿಯಿಂದ ಕೇಂದ್ರಕ್ಕೆ ಡೆಡ್ ಲೈನ್!

ಟಿಡಿಪಿ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದು, ಶಿವಸೇನೆ ಬಿಜೆಪಿ ವಿರುದ್ಧ ಹೆಜ್ಜೆ ಹೆಜ್ಜೆಗೂ ಟೀಕಾ ಪ್ರಹಾರ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಮೈತ್ರಿಯ ತಲೆಬಿಸಿ ಪ್ರಾರಂಭವಾಗಿದೆ.
ಎಲ್ ಜೆಪಿ
ಎಲ್ ಜೆಪಿ
Updated on: 
ನವದೆಹಲಿ: ಟಿಡಿಪಿ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದು, ಶಿವಸೇನೆ ಬಿಜೆಪಿ ವಿರುದ್ಧ ಹೆಜ್ಜೆ ಹೆಜ್ಜೆಗೂ ಟೀಕಾ ಪ್ರಹಾರ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಮೈತ್ರಿಯ ತಲೆಬಿಸಿ ಪ್ರಾರಂಭವಾಗಿದೆ. 
ದಲಿತರ ವಿರುದ್ಧ ನಡೆಯುತ್ತಿರುವ ಹಲ್ಲೆಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಎನ್ ಡಿಎ ಮಿತ್ರಪಕ್ಷ ಲೋಕ್ ಜನಶಕ್ತಿಯ ನಾಯಕರಾದ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಚಿರಾಗ್ ಪಾಸ್ವಾನ್, ದಲಿತರ ವಿರೌದ್ಧದ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸಲು ಹಾಗೂ  ಎನ್ ಜಿಟಿ ಅಧ್ಯಕ್ಷರನ್ನು ವಜಾಗೊಳಿಸುವುದು ಕೇಂದ್ರ ಸರ್ಕಾರಕ್ಕೆ ಆ.9 ರ ವರೆಗೂ ಗಡುವು ನೀಡಿದ್ದಾರೆ. 
ಈ ಬಗ್ಗೆ ಮಾತನಾಡಿರುವ ಚಿರಾಗ್ ಪಾಸ್ವಾನ್, "ಬಿಜೆಪಿಗೆ ನಾವು ನೀಡುವುದು ವಿಷಯಾಧಾರಿತ ಬೆಂಬಲ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಕ್ಕೂ ಸಹ ಹಿಂದುಳಿದ, ದಲಿತ ವರ್ಗದ ಹಿತಾಸಕ್ತಿಯೇ ಪ್ರಮುಖ ಕಾರಾಣವಾಗಿತ್ತು. ಆದರೆ ಈಗ ದಲಿತರ ಮೇಲಿನ ಹಲ್ಲೆಗಳು ಆತಂಕ ಮೂಡಿಸುತ್ತಿದ್ದು, ಕೇಂದ್ರ ಸರ್ಕಾರ ಶೀಘ್ರವೇ ಕಠಿಣ ಕಾನೂನು ಜಾರಿಗೊಳಿಸಬೇಕಿದೆ, ಇದಕ್ಕಾಗಿ ಆ.9 ವರೆಗೆ ಗಡುವು ನೀಡುತ್ತಿದ್ದೆವೆ ಎಂದು ಹೇಳಿದ್ದಾರೆ. 
ಗಡುವು ಮೀರಿದರೆ ಬಿಜೆಪಿಯೊಂದಿಗಿನ ಮೈತ್ರಿ ತೊರೆಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಎಲ್ ಜೆ ಪಿ ನಾಯಕರು, ಆ ಪರಿಸ್ಥಿತಿ ಬಂದಾಗ ನಿರ್ಧಾರ ಕೈಗೊಳ್ಳುತ್ತೆವೆ, ಆದರೆ ಮೋದಿ ಸರ್ಕಾರದ ಬಂದ ನಂತರ ದಲಿತ ಸಮುದಾಯಕ್ಕೆ ಹೆಚ್ಚು ಅನುಕೂಲವಾಗುವಂತಹ ಯೋಜನೆಗಳು ಜಾರಿಗೆ ಬಂದಿವೆ ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಗ್ಗೆ ನಮಗೆ ವಿಶ್ವಾಸವಿದೆ, ಏಕಾಏಕಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಎಲ್ ಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. 
ದಲಿತರ ವಿರುದ್ಧ ದೌರ್ಜನ್ಯ ತಡೆಗೆ ಎಸ್ ಸಿ ಎಸ್ ಟಿ ಕಾಯ್ದೆಯನ್ನು ಪುನಃ ಜಾರಿಗೊಳಿಸಬೇಕೆಂದು ಆಗ್ರಹಿಸಿ ಆ.10 ರಂದು ವಿವಿಧ ದಲಿತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿವೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com