ದೆಹಲಿ: ಗೋಶಾಲೆಯಲ್ಲಿ 36 ಹಸುಗಳು ದಿಢೀರ್ ಸಾವು

ರಾಜಧಾನಿ ದೆಹಲಿಯ ಹೊರವಲಯದ ಚಾವ್ಲಾ ಎಂಬ ಪ್ರದೇಶದಲ್ಲಿರುವ ಗೋಶಾಲೆಯಲ್ಲಿ ಕಳೆದೆರಡು ದಿನಗಳಲ್ಲಿ 36 ಹಸುಗಳು ದಿಢೀರ್ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ರಾಜಧಾನಿ ದೆಹಲಿಯ ಹೊರವಲಯದ ಚಾವ್ಲಾ ಎಂಬ ಪ್ರದೇಶದಲ್ಲಿರುವ ಗೋಶಾಲೆಯಲ್ಲಿ ಕಳೆದೆರಡು ದಿನಗಳಲ್ಲಿ 36 ಹಸುಗಳು ದಿಢೀರ್ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. 
ಗೋವುಗಳ ಸಾವು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ಭೇಡಿ ನೀಡಿದ್ದು, ಗೋಶಾಲೆಯಲ್ಲಿ ಒಟ್ಟು 1400 ಸಾವಿರ ಗೋವುಗಳಿದ್ದು, ಇದರಲ್ಲಿ ದಿಢೀರನೇ 36 ಹಸುಗಳು ಸಾವನ್ನಪ್ಪಿರುವುದು ಖಚಿತವಾಗಿದೆ. 
ಘಟನೆ ಬಳಿಕ ಅಧಿಕಾರಿ ಕುಲ್ದೀಪ್ ಸಿಂಗ್ ಗಂಗ್ ಅವರು, ಹಸುಗಳ ಸಾವಿಗೆ ಪ್ರಮುಖ ಕಾರಣಗಳನ್ನು ತಿಳಿದುಕೊಳ್ಳುವ ಸಲುವಾಗಿ ತಂಡವನ್ನು ರಚನೆ ಮಾಡಿದ್ದು, ಕಕ್ರೋಲಾ, ಗೊಯ್ಲಾ ಡೈರಿ, ನಜಾಗರ್ಹ್, ಡಿಚೌನ್ ಕಲನ್, ಛಾವ್ಲಾ ಮತ್ತು ನಂಗಲಿ ಡೈರಿಯಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯರು ಇದೀಗ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com