ಎನ್ಆರ್ಸಿ ಅಂತಿಮ ವರದಿ ರೂಪಿಸುವಾಗ ಅನುಸರಿಸಿದ ವಿಧಾನದ ಬಗೆಗೆ ಪ್ರಶ್ನೆಗಳಿವೆ.ಒಟ್ಟಾರೆ ಪ್ರಕ್ರಿಯೆಯೆ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳು ಎದ್ದಿದೆ. ಹೀಗಾಗಿ ಸರ್ಕಾರ ಪ್ರಕ್ರಿಯೆಯಲ್ಲಿನ ಎಲ್ಲಾ ಬಗೆಯ ನ್ಯೂನತೆಯನ್ನು ಪರಿಹರಿಸಬೇಕು. ಈ ಹಿಂದೆ ರಾಜೀವ್ ಗಾಂಧಿ ಅವರ ಕಾಲದಲ್ಲಿ ನಡೆದಿದ್ದ 1985 ರ ಅಸ್ಸಾಂ ಒಪ್ಪಂದವು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂತ್ರವಾಗಿದೆ. ಹೀಗಾಗಿ ಇದನ್ನೇ ಮಾನದಂಡವಾಗಿರಿಸಿಕೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.