ಶಿಮ್ಲಾ: ಕಣಿವೆಗೆ ಉರುಳಿದ ಬಸ್, 7 ಮಂದಿ ದುರ್ಮರಣ

ಹಿಮಾಚಲ ಪ್ರದೇಶದ ರಸ್ತೆ ಸಾರಿಗೆ ಸಂಸ್ಥೆ ಬಸ್ ಕಣಿವೆಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಚೈಲಾ ಎಂಬಲ್ಲಿ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿಮ್ಲಾ: ಹಿಮಾಚಲ ಪ್ರದೇಶದ ರಸ್ತೆ ಸಾರಿಗೆ ಸಂಸ್ಥೆ ಬಸ್ ಕಣಿವೆಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಚೈಲಾ ಎಂಬಲ್ಲಿ ನಡೆದಿದೆ.
ಟಿಕ್ಕಾರ್ ಎಂಬಲ್ಲಿಂದ ಶಿಮ್ಲಾಗೆ ಬರುತ್ತಿದ್ದ ಬಸ್ ಚೈಲಾ ಬಳಿ ಕಣಿವೆಗೆ ಉರುಳಿ 7 ಮಂದಿ ಸಾವಿಗೀಡಾಗಿದ್ದು, 26 ಮಂದಿಗೆ ಗಾಯಗಳಾಗಿವೆ. ಬಸ್‍ನಲ್ಲಿ 33 ಪ್ರಯಾಣಿಕರಿದ್ದರು. ಅಪಘಾತದ ವೇಳೆ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು ಇದನ್ನು ನೋಡಿದ ಕಾರು ಚಾಲಕರೊಬ್ಬರು ತೋಘ್ ಪೊಲೀಸ್ ಠಾಣೆಗೆ ವಿಷಯ ತಲುಪಿಸಿದ್ದಾರೆ. ಶಿಮ್ಲಾದಿಂದ 42 ಕಿಮೀ ದೂರದಲ್ಲಿರುವ ತೋಘ್-ಹಟ್ಕೊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ತೋಘ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡವರನ್ನು ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್ ಆ್ಯಂಡ್ ಹಾಸ್ಪಿಟಲ್‍ಗೆ ದಾಖಲಿಸಲಾಗಿದೆ. .ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಬಸ್ ಉರುಳಿ ಬಿದ್ದಿದೆ ಎಂದು ಶಂಕಿಸಾಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com