ಗುರು ಶಿಷ್ಯರ ಬಾಂಧವ್ಯ ಅಂದರೆ ಇದೇ ಇರಬೇಕು. ಹೌದು ವರ್ಗವಾಗಿದ್ದ ಶಿಕ್ಷಕನನ್ನು ನಮ್ಮನ್ನು ಬಿಟ್ಟುಹೋಗ ಬೇಡಿ ಸರ್,, ಪ್ಲೀಸ್ ಸರ್ ಎಂದು ವಿದ್ಯಾರ್ಥಿಗಳು ಗೋಗರೆದಿದ್ದಾರೆ.
ತಮಿಳುನಾಡಿನ ತಿರುವಳ್ಳುವರ್ ಸಮೀಪದ ವೆಲ್ಲಿಯಾಗರಮ್ ಸರ್ಕಾರಿ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ. ಭಗವಾನ್ ಗೆ ಮಕ್ಕಳು ಮುತ್ತಿಕೊಂಡು ತಮ್ಮನ್ನು ಬಿಟ್ಟು ಹೋಗದಂತೆ ಗೋಗರೆದಿದ್ದಾರೆ. ಆದರೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಆದೇಶವನ್ನು ಶಿಕ್ಷಕರು ಪಾಲಿಸಬೇಕಿತ್ತು.
ಗೋಗರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಒಂದಿಷ್ಟು ಸಾಂತ್ವನದ ಮಾತುಗಳನ್ನು ಹೇಳಿ ಇಂಗ್ಲಿಷ್ ಶಿಕ್ಷಕ ಅಂತಿಮವಾಗಿ ಮುಗ್ಧ ಮಕ್ಕಳನ್ನು ಸಂತೈಸಿ ಹೊರನಡೆದರು. ಮಕ್ಕಳು ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ಕ್ಷಣಗಳು ವಿಡಿಯೋ ನೋಡಿದರೆ ಕಣ್ಣಲ್ಲಿ ನೀರು ಬರದೆ ಇರಲಾರದು.