ನವದೆಹಲಿ: ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ಟಿಕೆಟ್ ಕಾಯ್ದಿಸಿರುವವರು ಇನ್ನು ಮುಂದೆ ಐಆರ್ ಸಿಟಿಸಿ ಪೇಮೆಂಟ್ ಗೇಟ್ ವೇ ಮೂಲಕವೇ ಹಣ ಪಾವತಿ ಮಾಡಬಹುದಾಗಿದೆ.
ಐಆಸಿಟಿಸಿ -ಐ ಪೇ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಐಆಸ್ ಸಿಟಿಸಿ, ಆಗಸ್ಟ್ ನಿಂದ ಪೇಮೆಂಟ್ ಅಗ್ರಿಗೇಟರ್ ವೆಬ್ ಸೈಟ್ ನಲ್ಲಿ ಲಭ್ಯವಿರಲಿದ್ದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್, ಯುಪಿಐ, ವಾಲೆಟ್ಗಳ ಮೂಲಕ ಹಣ ಪಾವತಿ ಮಾಡಬಹುದಾಗಿದೆ ಎಂದು ತಿಳಿಸಿದೆ.
ಪ್ರತಿ ದಿನ ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ 13 ಲಕ್ಷ ಟಿಕೆಟ್ ಗಳನ್ನು ಕಾಯ್ದಿರಿಸಲಾಗುತ್ತದೆ.