ಉಗ್ರವಾದಿಗಳಿಗಿಂತ ಸೇನೆಯಿಂದ ಹೆಚ್ಚು ನಾಗರೀಕರ ಹತ್ಯೆ: ಕಾಂಗ್ರೆಸ್ ನಾಯಕನಿಗೆ ಎಲ್ಇಟಿ ಬೆಂಬಲ

ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕಾಶ್ಮೀರದಲ್ಲಿ ಉಗ್ರರಿಗಿಂತ ಹೆಚ್ಚು ಪ್ರಮಾಣದಲ್ಲಿ ಯೋಧರೇ ಜನಸಾಮಾನ್ಯರನ್ನು ಹತ್ಯೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಈ ಹೇಳಿಕೆಗೆ ಉಗ್ರ ಸಂಘಟನೆಯಾದ ಲಷ್ಕರ್-ಇ-ತೊಯ್ಬಾ ಬೆಂಬಲ ವ್ಯಕ್ತಪಡಿಸಿದೆ. 
ಗುಲಾಂ ನಬಿ ಆಜಾದ್ ಅವರ ಹೇಳಿಕೆ ಕುರಿತು ಈ ಮೇಲ್ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಮೂಲಕ ಎಲ್ಇಟಿ ಉಗ್ರ ಸಂಘಟನೆ ವಕ್ತಾರ ಡಾ.ಅಬ್ದುಲ್ ಘಜ್ನವಿ, ಕಾಶ್ಮೀರ ಕುರಿತ ಗುಲಾಂ ನಬಿ ಆಜಾದ್ ಅವರ ಹೇಳಿಕೆ, ಮೊದಲಿನಿಂದಲೂ ನಾವು ಪ್ರತಿಪಾದಿಸಿಕೊಂಡಂತೇ ಇದೆ ಎಂದು ಹೇಳಿದ್ದಾರೆ. 
ರಾಜ್ಯದಲ್ಲಿ ಮತ್ತೆ ರಾಜ್ಯಪಾಲರ ಆಡಳಿತ ಹೇರುವ ಮೂಲಕ ಈ ಹಿಂದೆ ಜಗಮೋಹನ್ ಅವಧಿಯಲ್ಲಿ ನಡೆದಿದ್ದ ಅಮಾಯಕರ ನರಮೇಧವನ್ನು ಮತ್ತೆ ಮಾಡಲು ಭಾರತ ಸರ್ಕಾರ ಹೊರಟಿದೆ. ರಾಜ್ಯಪಾಲರ ಆಡಳಿತ, ರಾಜ್ಯದಲ್ಲಿ ಇನ್ನಷ್ಟು ಪ್ರಮಾಣದಲ್ಲಿ ನಾಗರೀಕರ ಸಾವಿಗೆ ಕಾರಣವಾಗಲಿದೆ ಎಂದು ಹೇಳಿದ್ದಾನೆ. 
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಗುಲಾಂ ನಬಿ ಆಜಾದ್, ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಉಂಟಾಗುವ ಸಾವಿಗಿಂತಲೂ ಹೆಚ್ಚಾಗಿ ಸೇನಾ ಕಾರ್ಯಾಚರಣೆಯಿಂದಲೇ ಜನರು ಸಾವನ್ನಪ್ಪುತ್ತಿದ್ದಾರೆ. ಯೋಧರ ದಾಳಿ, ಉಗ್ರರಿಗಿಂತ ಹೆಚ್ಚಾಗಿ ಜನಸಾಮಾನ್ಯರನ್ನೇ ಗುರಿಯಾಗಿಸಿದೆ. ಉದಾಹರಣೆಗೆ ಪುಲ್ವಾಮಾದಲ್ಲಿ ಯೋಧರ ದಾಳಿಗೆ ಬಲಿಯಾಗಿದ್ದು, ಓರ್ವ ಉಗ್ರನಾಗಿದ್ದರೆ, ಅದೇ ವೇಳೆ 13 ಅಮಾಯಕ ನಾಗರೀಕರು ಸಾವನ್ನಪ್ಪಿದ್ದಾರೆಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com