ಸಹೋದ್ಯೋಗಿ ಪತ್ನಿ ಮೇಲೆ ಮೋಹ, ಮೇಜರ್ ಪತ್ನಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್!

ದೆಹಲಿಯಲ್ಲಿ ನಡೆದಿದ್ದ ಮೇಜರ್ ದ್ವಿವೇದಿ ಪತ್ನಿಯ ಭೀಕರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣ ಸಂಬಂಧ ಬಂಧಿತರಾಗಿರುವ ಮತ್ತೋರ್ವ ಮೇಜರ್ ಹಂಡಾ ಅವರು ಕೊಲೆಯಾದ ಶೈಲಜಾ ಅವರನ್ನು ವಿವಾಹವಾಗ ಬೇಕು ಎಂದುಕೊಂಡಿದ್ದನಂತೆ.
ಕೊಲೆಯಾದ ಮೇಜರ್ ದ್ವಿವೇದಿ ಪತ್ವಿ ಶೈಲಜಾ ಮತ್ತು ಬಂಧಿತ ಮೇಜರ್ ನಿಖಿಲ್ ಹಂಡಾ
ಕೊಲೆಯಾದ ಮೇಜರ್ ದ್ವಿವೇದಿ ಪತ್ವಿ ಶೈಲಜಾ ಮತ್ತು ಬಂಧಿತ ಮೇಜರ್ ನಿಖಿಲ್ ಹಂಡಾ
Updated on: 
ನವದೆಹಲಿ: ದೆಹಲಿಯಲ್ಲಿ ನಡೆದಿದ್ದ ಮೇಜರ್ ದ್ವಿವೇದಿ ಪತ್ನಿಯ ಭೀಕರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪ್ರಕರಣ ಸಂಬಂಧ ಬಂಧಿತರಾಗಿರುವ ಮತ್ತೋರ್ವ ಮೇಜರ್ ಹಂಡಾ ಅವರು ಕೊಲೆಯಾದ ಶೈಲಜಾ ಅವರನ್ನು ವಿವಾಹವಾಗ ಬೇಕು ಎಂದುಕೊಂಡಿದ್ದನಂತೆ.
ನಿನ್ನೆ ದೆಹಲಿ ಸೇನಾ ಕ್ಯಾಂಪ್ ಹೊರವಲಯದಲ್ಲಿ ನಡೆದಿದ್ದ ಮೇಜರ್ ದ್ವೀವೇದಿ ಅವರ ಪತ್ನಿ ಶೈಲಜಾ ದ್ವಿವೇದಿ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿದ್ದು, ಪ್ರಕರಣ ಸಂಬಂಧ ಬಂಧಿತರಾಗಿರುವ ಮೇಜರ್ ಹಂಡಾ ಹತ್ಯೆಯನ್ನು ತಾವೇ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಮೇಜರ್ ಹಂಡಾ ಅವರು ಶೈಲಜಾ ಅವರನ್ನು ಪ್ರೀತಿಸುತ್ತಿದ್ದರಂತೆ. ಅಲ್ಲದೆ ಮದುವೆಯಾಗುವಂತೆ ಅವರನ್ನು ಒತ್ತಾಯಿಸುತ್ತಿದ್ದರಂತೆ. ಇದಕ್ಕೆ ಆಕೆ ಒಪ್ಪದಿದ್ದಾಗ ಆಕೆಯ ಕತ್ತು ಸೀಳಿ ದೇಹದ ಮೇಲೆ ಕಾರು ಹತ್ತಿಸಿ ಕೊಂದು ಹಾಕಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯಂತೆ, ಮೇಜರ್ ದ್ವಿವೇದಿ ಮತ್ತು ಮೇಜರ್ ಹಂಡಾ ನಾಗಾಲ್ಯಾಂಡ್ ನ ದಿಮಾಪುರ್ ಗೆ ವರ್ಗಾವಣೆಯಾಗಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಮೇಜರ್ ದ್ವಿವೇದಿ ಮತ್ತು ಅವರ ಪತ್ನಿ ಶೈಲಜಾ ಇಬ್ಹರೂ ಸೇರಿದ್ದರು. ಆದೇ ಕಾರ್ಯಕ್ರಮಕ್ಕೆ ಮೇಜರ್ ಹಂಡಾ ಕೂಡ ಪಾಲ್ಗೊಂಡಿದ್ದರು. ಶೈಲಜಾ ಅವರನ್ನು ಕಂಡ ಹಂಡಾ ಆಗಲೇ ಅವರ ಮೇಲೆ ಕಣ್ಣು ಹಾಕಿದ್ದರು. ಅಕೆಯ ಪರಿಚಯ ಬೆಳೆಸಿಕೊಂಡ ಹಂಡಾ ಕ್ರಮೇಣ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದರು.
ಬಳಿಕ ಫೋನ್, ಮೆಸೇಜ್, ವಾಟ್ಸಪ್, ಫೇಸ್ ಬುಕ್ ಹೀಗೆ ನಾನಾ ರೀತಿಯಲ್ಲಿ ಹಂಡಾ ಅವರು ಶೈಲಾಜರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಒಂದು ದಿನ ಆಕೆಯಯ ಬಳಿ ಮೇಜರ್ ಹಂಡಾ  ತಮ್ಮ ಪ್ರೀತಿ ನಿವೇದನೆ ಮಾಡಿಕೊಂಡಿದ್ದು, ಇದಕ್ಕೆ ಶೈಲಜಾ ಒಪ್ಪಲಿಲ್ಲ. ತಾನು ಮದುವೆಯಾಗಿದ್ದು, ತನಗೆ ಓರ್ವ ಮಗನಿದ್ದಾನೆ ಎಂದು ಹೇಳಿ ಸಮಾಧಾನ ಪಡಿಸಿದ್ದರು. ಇದಾಗ್ಯೂ ಹಂಡಾ ಆಕೆಯನ್ನು ಆಗಾಗ ಒತ್ತಾಯಿಸುತ್ತಿದ್ದರು. ಈಗ್ಗೆ ಒಂದು ಹಂಡಾ ಅವರು ಶೈಲಜಾ ಅವರಿಗೆ ವಿಡಿಯೋ ಕರೆ ಮಾಡಿದ್ದಾಗ ಮೇಜರ್ ದ್ವಿವೇದಿ ಇದನ್ನು ಗಮನಿಸಿ ಹಂಡಾಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಪತ್ನಿ ಶೈಲಜಾ ಆತನಿಂದ ದೂರ ಇರುವಂತೆ ಹೇಳಿದ್ದರು.
ಇದರಿಂದ ಕುಪಿತನಾಗಿದ್ದ ಮೇಜರ್ ಹಂಡಾ ಶೈಲಜಾರನ್ನು ಪುಸಲಾಯಿಸಿ ಕರೆಸಿಕೊಂಡು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕಾರಿನಲ್ಲೇ ಮದುವೆಗಾಗಿ ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ ಕ್ರೋಧಗೊಂಡು ಆಕೆಯ ಕತ್ತು ಸೀಳಿದ್ದಾನೆ. ಬಳಿಕ ಚಲಿಸುತ್ತಿದ್ದ ಕಾರಿನಿಂದಲೇ ಆಕೆಯನ್ನು ಹೊರಗೆತಳ್ಳಿ ಆಕೆಯ ಮೇಲೆ ಹಲವು ಬಾರಿ ಕಾರು ಹತ್ತಿಸಿದ್ದಾನೆ. ನೋಡುಗರಿಗೆ ಇದು ಅಪಘಾತವೆಂದು ತಿಳಿಯಲಿ ಎಂದು ಆತ ಹೀಗೆ ಮಾಡಿದ್ದ ಎಂದು ಪೊಲಿೀಸರು ತಿಳಿಸಿದ್ದಾರೆ.
ಅಲ್ಲದೆ ಕಾರಿನ ಸೀಟ್ ಗಳಿಗೆ ಅಂಟಿಕೊಂಡಿದ್ದ ರಕ್ತಕಲೆಗಳನ್ನು ಆತ ತನ್ನ ಟವಲ್ ನಿಂದ ಒರೆಸಿ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.
ಪ್ರಕರಣ ಬಯಲಾಗಿದ್ದು ಹೇಗೆ..?
ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಮೇಜರ್ ದ್ವಿವೇದಿ ಅವರು ಹಂಡಾ ಕುರಿತ ವಿಚಾರವನ್ನು ಬಹಿರಂಗಗೊಳಿಸಿದ್ದರು. ಈ ವೇಳೆ ಆತನಿಗೆ ಕರೆ ಮಾಡಿದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕೇಳಿದ್ದರು,. ಇದಕ್ಕೆ ಒಪ್ಪದ ಆತ ಪೋನ್ ಕಟ್ ಮಾಡಿ ಕೂಡಲೇ ಪರಾರಿಯಾಗಿದ್ದ. ದೆಹಲಿಯಿಂದ ಮೀರುತ್ ವರೆಗೂ ಕಾರಿನಲ್ಲಿ ಹೋಗಿದ್ದ. ಅಲ್ಲದೆ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದ ಪೊಲೀಸರು ಅದನ್ನುಪರಿಶೀಲಿಸಿದಾಗ ಮೇಜರ್ ಹಂಡಾ ಶೈಲಾಜದರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋದ ದೃಶ್ಯ ಸಿಕ್ಕಿದೆ. ಇದಾದ ಸುಮಾರು 2 ಗಂಟೆ ಅಂತರದಲ್ಲೇ ಶೈಲಜಾ ಅವರ ಮೃತ ದೇಹ ಪತ್ತೆಯಾಗಿದೆ. ಹೀಗಾಗಿ ಮೇಜರ್ ಹಂಡಾ ಕೊಲೆ ಮಾಡಿದ್ದು ಧೃಡಪಟ್ಟಿದ್ದು, ಆತನಿಗಾಗಿ ಬಲೆ ಬೀಸಿದ್ದ ಪೊಲೀಸರು ಆತನ ಮೇಗ್ರೇನ್ ಸಮಸ್ಯೆಗಾಗಿ ಅಸ್ಪತ್ರೆಗೆ ದಾಖಲಾಗಿದ್ದಾಗ ಆಸ್ಪತ್ರೆಯಲ್ಲೇ ಆತನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com