ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಮೇಜರ್ ಹಂಡಾ ಮತ್ತು ಕೊಲೆಯಾದ ಮೇಜರ್ ದ್ವಿವೇದಿ ಪತ್ನಿ ಶೈಲಜಾ ಅವರ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿರುವ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ದೂರವಾಣಿ ಕರೆಗಳು ಮಾಹಿತಿ, ಎಸ್ ಎಂಎಸ್, ವಾಟ್ಸಪ್ ಸಂದೇಶಗಳು, ಫೇಸ್ ಬುಕ್ ದತ್ತಾಂಶ ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಈ ಪೈಕಿ ಎರಡೂ ಮೊಬೈಲ್ ಗಳಲ್ಲಿ ಎರಡು ಆ್ಯಪ್ ಗಳು ಡಿಲೀಟ್ ಆಗಿದ್ದು, ಈ ಆ್ಯಪ್ ಗಳ ಮಾಹಿತಿಯನ್ನು ಬ್ಯಾಕ್ ಅಪ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.