ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿ ಒಡಿಶಾದಲ್ಲಿ ಕಣ್ಮರೆ, ನಕ್ಸಲರಿಂದ ಅಪಹರಣ ಶಂಕೆ

ಒಡಿಶಾ ಭುವನೇಶ್ವರದ ವೈದ್ಯಕೀಯ ಕಾಲೇಜಿನಿಂದ ಕಾಣೆಯಾಗಿದ್ದ ಕಾಶ್ಮೀರ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಮಾವೋವಾದಿ ನಕ್ಸಲರ ವಶದಲ್ಲಿದ್ದಾನೆ ಎಂದು ಒಡಿಶಾ ಪೋಲೀಸರು ಶಂಕೆ........
ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿ ಒಡಿಶಾದಲ್ಲಿ ಕಣ್ಮರೆ, ನಕ್ಸಲರಿಂದ  ಅಪಹರಣ ಶಂಕೆ
ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿ ಒಡಿಶಾದಲ್ಲಿ ಕಣ್ಮರೆ, ನಕ್ಸಲರಿಂದ ಅಪಹರಣ ಶಂಕೆ
Updated on: 
ಭುವನೇಶ್ವರ್(ಒಡಿಶಾ): ಒಡಿಶಾ ಭುವನೇಶ್ವರದ ವೈದ್ಯಕೀಯ ಕಾಲೇಜಿನಿಂದ ಕಾಣೆಯಾಗಿದ್ದ ಕಾಶ್ಮೀರ ಮೂಲದ ಎಂಬಿಬಿಎಸ್ ವಿದ್ಯಾರ್ಥಿ ಮಾವೋವಾದಿ ನಕ್ಸಲರ ವಶದಲ್ಲಿದ್ದಾನೆ ಎಂದು ಒಡಿಶಾ ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೋಲೀಸರಿಗೆ ದೊರಕಿರುವ ಎರಡು ಕರಪತ್ರಗಳು ಈ ಶಂಕೆಯನ್ನು ಇನ್ನಷ್ಟು ಬಲಪಡಿಸಿದೆ.
ಆಲ್ ಇಂಡಿಯಾ ಇನ್ ಸ್ಟಿಟ್ಯೂತ್ ಆಓ ಮೆಡಿಕಲ್ ಸೈನ್ಸ್, ಭುವನೇಶ್ವರ್ ನ ವಿದ್ಯಾರ್ಥಿಯಾಗಿದ್ದ ಸುಹೈಲ್ ಐಜಾಜ್ ನನ್ನು ನಕ್ಸಲರು ಬಂಧನದಲ್ಲಿರಿಸಿಕೊಂಡಿದ್ದಾರೆ. "ಸುಹೈಲ್ ಕಾಣೆಯಾದ ಸ್ಥಳದಲ್ಲಿ ನಮಗೆ ಎರಡು ಕರಪತ್ರಗಳು ಸಿಕ್ಕಿದೆ. ಇದೊಂದು ನಕ್ಸಲರ ದುಷ್ಕೃತ್ಯ ಎನ್ನುವ ಶಂಕೆ ವ್ಯಕ್ತವಾಗಿದ್ದು ತನಿಖೆ ನಡೆಯುತ್ತಿದೆ ಎಂದು ಭುವನೇಶ್ವರ್ ಪೋಲೀಸ್ ಕಮಿಷನರ್ ವೈ.ಬಿ. ಖುರಾನಿಯಾ ಹೇಳಿದ್ದಾರೆ.
ಪೋಲೀಸ್ ತಂಡವು ಇದಾಗಲೇ ಕೋಲ್ಕತ್ತಾ ಹಾಗೂ ಹೌರಾಗಳಲ್ಲಿ ತನಿಖೆ ನಡೆಸಿದೆ. ಕಾಶ್ಮೀರ ಪೋಲೀಸರೊಡನೆ ಸಹ ನಮ್ಮ ತನಿಖಾ ತಂಡ ಸಂಪರ್ಕದಲ್ಲಿದೆ. ಎಂದಿರುವ ಖುರಾನಿಯಾ ಯುವಕನ ಚಿತ್ರವನ್ನು ಎ ಎನ್ ಐ ಸಂಸ್ಥೆಯೊಡನೆ ಹಂಚಿಕೊಂಡಿದ್ದಾರೆ.
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯವನಾಗಿದ್ದ ಸುಹೈಲ್, 2016ರಿಂದ ಭುವನೇಶ್ವರ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ. ಇದೇ ಫೆ.9ರಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com