ಇದೇ ವೇಳೆ ನ್ಯಾಯಾಲಯಕ್ಕೆ ಕೆಲ ಪ್ರಮುಖ ದಾಖಲೆಗಳನ್ನು ಸಲ್ಲಿಕೆ ಮಾಡಿದ ಸಿಬಿಐ ಅಧಿಕಾರಿಗಳು, ಹಾಲಿ ತನಿಖೆ ವೇಳೆ ದೊಡ್ಡ ಮಟ್ಟದ ಹಗರಣ ಶಂಕೆ ಮೂಡುತ್ತಿದ್ದು, ಇದನ್ನು ಬಯಲಿಗೆಳೆಯಲು ತಮಗೆ ಮತ್ತಷ್ಟು ಕಾಲಾವಕಾಶಬೇಕು. ಅಂತೆಯೇ ಕಾರ್ತಿ ಚಿದಂಬರಂರನ್ನು ಮತ್ತಷ್ಟು ವಿಚಾರಣೆಗೊಳಪಡಿಸಬೇಕು ಎಂದು ಸಿಬಿಐ ಅಧಿಕಾರಿಗಳು ಮನವಿ ಮಾಡಿದ್ದರು.