ಇನ್ನು ಈ ಸಂಬಂಧ ಸ್ಪಷ್ಟನೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ, ನಿಗದಿತ ವೇಳಾಪಟ್ಟಿಯಂತೆ ಟೂರ್ನಿ ನಡೆಯಲಿದೆ ಎಂದು ಹೇಳಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, ಶ್ರೀಲಂಕಾದಲ್ಲಿ ಕೋಮು ಸಂಘರ್ಷ ಸಂಭವಿಸಿರುವ ಕುರಿತು ಮಾಹಿತಿ ಇದೆ. ಅಂತೆಯೇ ಕ್ಯಾಂಡಿಯಲ್ಲಿ ಕರ್ಫ್ಯೂ ಕೂಡ ಜಾರಿಮಾಡಲಾಗಿದೆ. ಆದರೆ ಇಂದು ಪಂದ್ಯ ನಡೆಯುತ್ತಿರುವುದು ಕೊಲಂಬೋದಲ್ಲಿ.. ಕ್ಯಾಂಡಿಯಲ್ಲಿ ಅಲ್ಲ.. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ನಾವು ಈಗಾಗಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಿದ್ದು ತಂಡಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಕೇಳಿದ್ದೇವೆ ಎಂದು ಬಿಸಿಸಿಐ ಹೇಳಿದೆ.