ನಾಗ್ಪುರ್: ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡಿಸವುದು ಕಷ್ಟ. ಆದರೆ ಉತ್ತರ ಪ್ರದೇಶದ ಪಟ್ಟಣ್ಣದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಭಾನುವಾರ ಆರ್ ಎಸ್ ಎಸ್ ವಿಶ್ವಾಸ ವ್ಯಕ್ತಪಡಿಸಿದೆ.
ವಿವಾದ ಸದ್ಯ ನ್ಯಾಲಯದಲ್ಲಿದೆ ಎಂದಿರುವ ಆರ್ ಎಸ್ಎಸ್ ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಶಿ ಅವರು, ಅಯೋಧ್ಯಯಲ್ಲಿ ರಾಮ ಮಂದಿರ ಬಿಟ್ಟು ಬೇರೆ ಏನನ್ನೂ ನಿರ್ಮಿಸಲು ಸಾಧ್ಯವಿಲ್ಲ ಮತ್ತು ಇದು ನಿರ್ಧರಿತ ಎಂದು ಹೇಳಿದ್ದಾರೆ.
ಆರ್ ಎಸ್ಎಸ್ ಅಖಿಲ ಬಾರತೀಯ ಪ್ರತಿನಿಧಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೈಯ್ಯಾಜಿ, ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಸುಪ್ರೀಂ ಆದೇಶ ಹೊರಬಿದ್ದ ನಂತರ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದಿದ್ದಾರೆ.
ಅಯೋಧ್ಯ ವಿವಾದವನ್ನು ಕೋರ್ಟ್ ನಿಂದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ವಿವಿಧ ಧಾರ್ಮಿಕ ಮುಖಂಡರೊಂದಿಗೆ ಶ್ರೀ ಶ್ರೀ ರವಿಂಶಕರ್ ಅವರು ಚರ್ಚಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಭೈಯ್ಯಾಜಿ, ಈ ವಿಚಾರದಲ್ಲಿ ಒಮ್ಮತಕ್ಕೆ ಬರುವುದು ಕಷ್ಟ ಎಂದರು.
ಪರಸ್ಪರ ಒಪ್ಪಿಗೆಯಿಂದಲೇ ಮಂದಿರ ನಿರ್ಮಾಣ ಮಾಡಬೇಕು ಎಂದು ನಾವು ಯಾವಾಗಲೂ ಹೇಳುತ್ತಿದ್ದೇವೆ. ಆದರೆ ನಮ್ಮ ಅನುಭವದ ಪ್ರಕಾರ, ಈ ವಿಚಾರದಲ್ಲಿ ಒಮ್ಮತ ಕಷ್ಟ ಎಂದಿದ್ದಾರೆ.