ಆಧಾರ್ ಗುರುತಿನ ವ್ಯವಸ್ಥೆಯ ದೃಢತೆಗೆ ಅನುಗುಣವಾಗಿ,12 ಅಂಕಿಯ ಬಯೋಮೆಟ್ರಿಕ್ ಐಡೆಂಟಿಫೈಯರ್ ಅನ್ನು ಪ್ರಕಟಿಸುವ ಯುಐಡಿಎಐ ಕೆಲ ದುಷ್ಕರ್ಮಿಗಳು ಆಧಾರ್ ಕಾರ್ಡ್ ಗಳನ್ನು ನಕಲು ಮಾಡುತ್ತಿದ್ದಾರೆ ಯುಐಡಿಎಐಗೆ ಇಂತಹಾ ಕಾರ್ಡ್ ಗಳ ಸಂಪೂರ್ಣ ಮಾಹಿತಿ ಸಿಗುವುದಿಲ್ಲ. ಇದರಿಂಡ ಆಧಾರ್ ಭದ್ರತೆಗೆ ಧಕ್ಕೆಯಿಲ್ಲ. ಈ ವರದಿಗಳು ಸತ್ಯಕ್ಕೆ ದೂರವಾಗಿದ್ದು ಆಧಾರ್ ಹಾಗೂ ಅದರ ದತ್ತಾಂಶದ ಭದ್ರತೆಗೆ ಯಾವ ಹಾನಿಯೂ ಆಗಿಲ್ಲ. ಯುಐಡಿಎಐ ಡೇಟಾಬೇಸ್ ನಿಂದ ಯಾವ ಆಧಾರ್ ಕಾರ್ಡ್ ಪಿಡಿಎಫ್ ಗಳನ್ನು ಪಡೆಯುವುದು ಸಾಧ್ಯವಿಲ್ಲ. ಆಧಾರ್ ಕಾರ್ಡ್ ಗಳನ್ನು ಪಡೆಯಲು ಯಾರೊಬ್ಬರ ಬಯೋಮೆಟ್ರಿಕ್ ಪ್ರಮಾಣ ಅಗತ್ಯವಿದ್ದು ಬೇರೆ ಗುರುತು ಚೀಟಿಗಳಂತೆ ಅದನ್ನು ನಕಲು ಮಾಡುವುದು ಸುಲಭವಲ್ಲ ಎಂದು ಯುಐಡಿಎಐ ವಾದಿಸಿದೆ.