ಬಿಜೆಪಿಯನ್ನು ಮಹಾಭಾರತದ ಕೌರವರಿಗೆ ಹೋಲಿಸಿದ ರಾಹುಲ್ ಗಾಂಧಿ

ಬಿಜೆಪಿ ಹಾಗೂ ಆರ್ ಎಸ್ ಎಸ್ ನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಹಾಭಾರತದಲ್ಲಿನ ಕೌರವರಿಗೆ ಹೋಲಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ಬಿಜೆಪಿ ಹಾಗೂ ಆರ್ ಎಸ್ ಎಸ್ ನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಹಾಭಾರತದಲ್ಲಿನ ಕೌರವರಿಗೆ ಹೋಲಿಸಿದ್ದಾರೆ.

ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಹಾಗೂ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಬಳಿಕ  84 ನೇ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ,   ಬಿಜೆಪಿ ವಿರುದ್ಧ ಹರಿಹಾಯ್ದರು.  ಆಡಳಿತಾರೂಢ ಸರ್ಕಾರಕ್ಕೆ  ಅಧಿಕಾರದ ಮದವೇರಿದೆ ಎಂದು ಆರೋಪಿಸಿದರು.

ಸಾವಿರಾರು ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ನಡೆದ ಯುದ್ದದಲ್ಲಿ ಕೌರವರು ಸೊಕ್ಕಿನಿಂದ ಹೋರಾಟ ನಡೆಸಿದರೆ, ಪಾಂಡವರು ನ್ಯಾಯಯುತವಾಗಿ ಹೋರಾಟ ನಡೆಸಿದರು. ಆದೇ ರೀತಿಯಲ್ಲಿ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದು, ಕಾಂಗ್ರೆಸ್ ನ್ಯಾಯಯುತವಾಗಿ ಹೋರಾಟ ನಡೆಸಲಿದೆ ಎಂದರು.

ಕೆಲ ವರ್ಷಗಳಿಂದಲೂ ನಿರೀಕ್ಷೆಯ ರೀತಿಯಲ್ಲಿ ನಾವೂ ನಿಂತಿಲ್ಲ. ನಮ್ಮನ್ನು ದೇಶದ ಜನ ಕೆಳಗೆ ನೂಕಿದ್ದಾರೆ .ಪ್ರಸ್ತುತ ದೇಶವನ್ನು ಭ್ರಷ್ಟಾಚಾರ ಹಾಗೂ ಅಧಿಕಾರ ನಿಯಂತ್ರಣ ಮಾಡುತ್ತಿದೆ ಎಂದು ಆರೋಪಿಸಿದರು.

ಜನರಿಗೆ ಉದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಬಿಜೆಪಿ ಗಮನ ಕೇಂದ್ರೀಕರಿಸಿಲ್ಲ . ಇದರ ಬಗ್ಗೆ ಮಾತನಾಡದ ಪ್ರಧಾನಿ ನರೇಂದ್ರಮೋದಿ ,  ಸಂಸತ್ತಿನಲ್ಲಿ ಗಬ್ಬರ್ ಸಿಂಗ್ ತೆರಿಗೆ ಹಾಗೂ ಯೋಗ ಬಗ್ಗೆ ಮಾತನಾಡುತ್ತಾರೆ, ಇದು ನಮಗೆ ಬೇಕಿಲ್ಲ, ಕಾಂಗ್ರೆಸ್  ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಡುವುದನ್ನು ನಿಲ್ಲಿಸುವುದಿಲ್ಲ ಎಂದರು.

 ಅಲ್ಪಸಂಖ್ಯಾತರ ಬಗೆಗಿನ ಬಿಜೆಪಿ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಸಹಸ್ರಾರು ಜನ ಮುಸ್ಲಿಂರು ದೇಶದಲ್ಲಿದ್ದಾರೆ.  ಏಕೆ ತಮಿಳು ಭಾಷಿಕರು, ಈಶಾನ್ಯ ಜನರ ಬಗ್ಗೆ ಮಾತನಾಡುವುದಿಲ್ಲ , ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಕಲಬುರಗಿ ಹತ್ಯೆಯಲ್ಲಿ ಏಕೆ ಮೌನ ವಹಿಸಿದ್ದೀರಾ. ಇದರಲ್ಲಿ ನಿಮ್ಮ ಪಾತ್ರವಿದೆಯೇ  ಎಂದು ರಾಹುಲ್ ಗಾಂಧಿ ಪ್ರಶ್ನೆಗಳ ಸುರಿಮಳೆಗರೆದರು.

 ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದ ಬಗ್ಗೆಯೂ ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನೀರವ್ ಮೋದಿ ಭಾರತದ ಶ್ರೀಮಂತ ಉದ್ಯಮಿಗಳು ಹಾಗೂ ಪ್ರಧಾನಿ ನಡುವಿನ  ಮಧ್ಯವರ್ತಿಯಾಗಿದ್ದಾರೆ. ಇದು ನಮ್ಮ ಪ್ರಧಾನಿ ಹೆಸರು ಕೂಡಾ ಆಗಿದೆ. ಐಪಿಎಲ್ ಕ್ರಿಕೆಟ್ ನಲ್ಲಿ ಭ್ರಷ್ಟಾಚಾರ ನಡೆಸಿದ  ಹೆಸರು ಕೂಡಾ ಮೋದಿ ಆಗಿದೆ. ಹಾಗಾದರೆ ಮೋದಿ ಅಂದರೆ ಅರ್ಥ ಏನು  ಇದು ಭಾರತದ ಅತ್ಯಂತ ಶ್ರಿಮಂತ ಉದ್ಯಮಿ ಹಾಗೂ ಪ್ರಧಾನಿ ನಡುವಿನ ಮಧ್ಯವರ್ತಿಯ ಸಂಕೇತವಾಗಿದೆ ಎಂದು ರಾಹುಲ್ ಗಾಂಧಿ ಆಪಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com