ಉಗ್ರರಿಂದ 9 ಗುಂಡು ತಿಂದಿದ್ದ ಚೇತನ್ ಕುಮಾರ್(ಚಿರತೆ) ಮತ್ತೆ ಕೆಲಸಕ್ಕೆ ಹಾಜರ್!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಂಡಿಪೊರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ 9 ಗುಂಡು ತಿಂದು ಎರಡು ತಿಂಗಳು ಕೋಮಾಗೆ ಜಾರಿದ ಸಿಆರ್‌ಫಿಎಫ್...
ಚೇತನ್ ಕುಮಾರ್
ಚೇತನ್ ಕುಮಾರ್
Updated on
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಂಡಿಪೊರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ 9 ಗುಂಡು ತಿಂದು ಎರಡು ತಿಂಗಳು ಕೋಮಾಗೆ ಜಾರಿದ ಸಿಆರ್‌ಫಿಎಫ್ ಕಮಾಂಡಿಗ್ ಆಫೀಸರ್ 45 ವರ್ಷದ ಚೇತನ್ ಕುಮಾರ್(ಚಿರತೆ) ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. 
ಬಂಡಿಪೋರಾದಲ್ಲಿ ನಡೆದ ಉಗ್ರರೊಂದಿಗಿನ ಗುಂಡಿನ ಚಕಮಕಿ ವೇಳೆ ಚೇತನ್ ಅವರ ಎದೆಗೆ ಒಂಬತ್ತು ಗುಂಡುಗಳು ಹೊಕ್ಕಿದ್ದವು. ದಾಳಿ ನಡೆದ ದಿನದಂದು ಚೇತನ್ ಅವರು ಪ್ರಜ್ಞೆ ಕಳೆದುಕೊಂಡು ಕೋಮಾಗೆ ಜಾರಿದ್ದರು. ಸರಿ ಸುಮಾರು ಎರಡು ತಿಂಗಳ ಬಳಿಕ ಅವರು ಕೋಮಾದಿಂದ ಹೊರಬಂದಿದ್ದರು. 
ಕೋಮಾದಿಂದ ಹೊರ ಬಂದ ಚೇತನ್ ಕುಮಾರ್ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದರು. ಸುದೀರ್ಘ ಚಿಕಿತ್ಸೆ ಬಳಿಕ ಇದೀಗ ಆರೋಗ್ಯ ಸುಧಾರಿಸಿಕೊಂಡಿದ್ದ ಚೇತನ್ ಕುಮಾರ್ ಅವರು ಕೆಲಸಕ್ಕೆ ಮತ್ತೆ ಹಾಜರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com