ನಿಜಾಮಬಾದ್(ತೆಲಂಗಾಣ): ಏಳು ಸೀಟಿನ ಆಟೋವೊಂದು ಬಾವಿಗೆ ಬಿದ್ದ ಪರಿಣಾಮ 11 ಮಂದಿ ದಾರುಣ ಸಾವನ್ನಪ್ಪಿದ್ದಾರೆ.
ತೆಲಂಗಾಣದ ನಿಜಾಮಾಬಾದ್ ನ ಮುಪ್ಕಾಲ್ ಗ್ರಾಮದಲ್ಲಿ ಆಟೋದಲ್ಲಿ 20 ಮಂದಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ನಾಲ್ವರು ಮಹಿಳೆಯರು ಹಾಗೂ ಆರು ಮಕ್ಕಳು ಸೇರಿದಂತೆ 11 ಮಂದಿ ಜಲಸಮಾಧಿಯಾಗಿದ್ದಾರೆ. ಇನ್ನು ಉಳಿದವರು ಈಜಿ ಮೇಲೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸಂತಾಪ ಸೂಚಿಸಿದ್ದಾರೆ. ಇನ್ನು ಅಪಘಾತಕ್ಕೆ ಮಿತಿ ಮೀರಿ ಜನರನ್ನು ತುಂಬಿಸಿಕೊಂಡಿದ್ದೆ ಕಾರಣ ಎಂದು ಹೇಳಲಾಗಿದೆ.