ಎಲ್ಲಾ ಕಡೆ ಲೀಕ್, 'ಚೌಕೀದಾರ' ವೀಕ್: ಪ್ರಧಾನಿ ವಿರುದ್ಧ ರಾಹುಲ್ ಟೀಕೆ

ಸಿಬಿಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದೂ ಸೇರಿದಂತೆ ದೇಶದಲ್ಲಿ ಸರಣಿ ಸೋರಿಕೆ ಹಗರಣಗಳು ನಡೆಯುತ್ತಿದ್ದು, ದೇಶದ ಚೌಕಿದಾರ್ ವೀಕ್ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಾ
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ಸಿಬಿಎಸ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದೂ ಸೇರಿದಂತೆ ದೇಶದಲ್ಲಿ ಸರಣಿ ಸೋರಿಕೆ ಹಗರಣಗಳು ನಡೆಯುತ್ತಿದ್ದು, ದೇಶದ ಚೌಕಿದಾರ್ ವೀಕ್ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಾ ಪ್ರಹಾರ ಮಾಡಿದ್ದಾರೆ. 
ಟ್ವಿಟರ್ ನಲ್ಲಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಕೇವಲ ಇನ್ನೊಂದು ವರ್ಷ ಎಂಬ ಹ್ಯಾಷ್ ಟ್ಯಾಗ್ ಬಳಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಅವಧಿಯಲ್ಲಿ ಎಷ್ಟೆಲ್ಲಾ ಲೀಕ್ ಆಗಿದೆ, ಆಧಾರ್, ಎಸ್ಎಸ್ ಸಿ ಪರೀಕ್ಷೆ, ಚುನಾವಣಾ ದಿನಾಂಕ, ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಡಾಟಾ ಸೋರಿಕೆ ನಡೆದಿದೆ. ಎಲ್ಲದರಲ್ಲೂ ಸೋರಿಕೆಯಾಗಿದ್ದು ನಮ್ಮ ಚೌಕಿದಾರರು ವೀಕ್ ಆಗಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com